ಇಂದು ಸಂಜೆ ಶ್ರೀ ಗಣೇಶನ ವೈಭವದ ಶೋಭಾಯಾತ್ರೆ – ಜಲಸ್ತಂಭನ
ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ 33 ನೇ ವರ್ಷದ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ.27 ರಂದು ಮಂಜು ಶ್ರೀ ಕ್ರೀಡಾಂಗಣ ದರ್ಖಾಸ್ತು ಪಾಲೆಪ್ಪಾಡಿಯಲ್ಲಿ ಪ್ರಾರಂಭಗೊಂಡಿತು.
ಬೆಳಿಗ್ಗೆ ಶ್ರೀ ಗಣಪತಿ ಹವನ ಹಾಗೂ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ಸಾಧಕರಿಗೆ ಸನ್ಮಾನ
2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಲಿಖಿತ್ ಶಾಂತಿಮೂಲೆ ಇವರನ್ನು ಸನ್ಮಾನಿಸಲಾಗುವುದು.
ಉತ್ತಮ ಕಾರ್ಯ ಸಾಧಕ ಹರೀಶ್ ಪಾಪುನಡ್ಕ,ಕರಾಟೆಯಲ್ಲಿ 17 ವರ್ಷದ ಒಳಗಿನ 70 ರಿಂದ 74 ಕೆಜಿ.ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ತನ್ಮಯ್ ರಾವ್.ಹೆಚ್ ಉದ್ದಂಪಾಡಿಯವರನ್ನು ಗೌರವಿಸಲಾಗುವುದು.















ಪೂರ್ವಾಹ್ನ ಗಂಟೆ 10.30 ರಿಂದ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ ಕಡಬ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.00 ಕ್ಕೆ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ.
ಸಾಯಂಕಾಲ ಗಂಟೆ 4.00 ರಿಂದ ಶ್ರೀ ಗಣೇಶನ ಶೋಭಾಯಾತ್ರೆಯು ಚೆಂಡೆವಾದ್ಯ ಘೋಷಗಳೊಂದಿಗೆ ಪಾಲೆಪ್ಪಾಡಿಯಿಂದ ಹೊರಟು ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.










