ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಆ.27ರಂದು ಗಣೇಶ ಚತುರ್ಥಿ ಪ್ರಯುಕ್ತ ಮಣ್ಣಿನಿಂದ ಗಣಪತಿ ಆಕೃತಿ ತಯಾರಿಸುವ (ಕ್ಲೇ ಮಾಡಲಿಂಗ್) ಕಾರ್ಯಕ್ರಮ ನಡೆಯಿತು.















ಸ್ಪರ್ಧೆಯು ಪ್ರತ್ಯೇಕವಾಗಿ 3 ವಿಬಾಗದಲ್ಲಿ 1 ರಿಂದ 4 ನೇ ತರಗತಿ, 5 ರಿಂದ 7 ನೇ ತರಗತಿ, 8 ರಿಂದ 10 ತರಗತಿಯವರೆಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.
ಈ ಸಂದರ್ಭದಲ್ಲಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಮಿತ್ರ ಬಳಗದ ಅಧ್ಯಕ್ಷ ಮತ್ತು ಸದಸ್ಯರು, ಮಕ್ಕಳ ಪೋಷಕರು ಮತ್ತು ಇತರರಿದ್ದರು.










