ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ
ಚಿತ್ರಕಲೆಯಲ್ಲಿ ಭಾಗವಹಿಸಿದ ನೂರಾರು ಜನ ವಿದ್ಯಾರ್ಥಿಗಳು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಐವರ್ನಾಡು ವತಿಯಿಂದ 39 ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಆ.27 ರಂದು ಬೆಳಿಗ್ಗೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು.
ಚಿತ್ರಕಲೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಅಧ್ಯಕ್ಷತೆ ವಹಿಸಿದ್ದರು.
ಭಾಸ್ಕರ ಕೋಡ್ತೀಲು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.















ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ, ಸದಸ್ಯರಾದ ಶಿವರಾಮ ನೆಕ್ರೆಪ್ಪಾಡಿ,,ಶ್ರೀಮತಿ ಆಶಾ ಮಡ್ತಿಲ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ,ರಾಧಾಕೃಷ್ಣ ಚಾಕೋಟೆ,ಮುರಳೀಧರ ಕೊಚ್ಚಿ, ಹಾಗೂ ಬಾಲಕೃಷ್ಣ ಮಡ್ತಿಲ,ರವಿನಾಥ ಎಂ.ಎಸ್.,ಕರುಣಾಕರ ಮಡ್ತಿಲ ಹಾಗೂ ಹಲವು ಜನ ಗಣ್ಯರು ಉಪಸ್ಥಿತರಿದ್ದರು.

ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು ಚಿತ್ರಕಲಾ ಸ್ಪರ್ಧೆ ನಡೆಸಿಕೊಟ್ಟರು. ಕಲಾವಿದ ದಿವಾಕರ ಕುತ್ಯಾಡಿ ತೀರ್ಪುಗಾರರಾಗಿ ಸಹಕರಿಸಿದರು.
ಅಜಿತ್ ನಿಡುಬೆ, ಪ್ರವೀಣ್ ಎಣ್ಣೆಕಳ ,ರೋಹಿತ್ ಬಾಂಜಿಕೋಡಿ ಸಹಕರಿಸಿದರು. 6 ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು.
ಎಲ್.ಕೆ.ಜಿ., ಯು.ಕೆ.ಜಿ ,ಅಂಗನವಾಡಿ ಮಕ್ಕಳಿಗೆ ಗಣಪತಿಯ ಚಿತ್ರಕ್ಕೆ ಬಣ್ಣ ತುಂಬುವುದು.ಕಲಾಕೃತಿಯನ್ನು ನೀಡಲಾಯಿತು.
ಉಳಿದ ವಿಭಾಗಗಳ ವಿದ್ಯಾರ್ಥಿಗಳಿಗೆ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.
ವಿಭಾಗ 2 (1ನೇ ಮತ್ತು 2 ನೇ ತರಗತಿ)ವಿಭಾಗ 3 (3 ನೇ ಮತ್ತು 4 ನೇ)ವಿಭಾಗ 4( 5ನೇ ಮತ್ತು 6,7ನೇ)ವಿಭಾಗ 5 (8ನೇ,9 , 10 ನೇ )
ಪ್ರತೀ ವಿಭಾಗದಲ್ಲೂ ವಿಜೇತರಿಗೆ ಪ್ರಥಮ,ದ್ವಿತೀಯ,ತೃತೀಯ ಫಲಕ ಹಾಗೂ ಆಕರ್ಷಕ ಬಹುಮಾನ ನೀಡಲಾಯಿತು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.










