ಧಾರ್ಮಿಕ ಕಾರ್ಯಕ್ರಮ
ಇಂದು ಸಂಜೆ ವೈಭವದ ಶೋಭಾಯತ್ರೆ- ಜಲಸ್ತಂಭನ
ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ, ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೌ. ಕ್ಯಾಪ್ಟನ್ ಜಯಕರ ಮಡ್ತಿಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ ಧಾರ್ಮಿಕ ಉಪನ್ಯಾಸ ಮಾಡಿದರು.















ದೇವಾಲಯದ ಪ್ರಧಾನ ಅರ್ಚಕರಾದ ವೆಂಕಟ್ರಮಣ ಕಾಡುತೋಟ ದಂಪತಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷ ಶಶಿಧರ ನಾಯರ್, ಶ್ರೀ ನರಸಿಂಹ ಶಾಸ್ತಾವು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಅರ್ಚಕ ಮಧ್ವರಾಜ್ ಭಟ್, ದೇವತಾರಾಧನ ಸಮಿತಿ ಕಾರ್ಯದರ್ಶಿ ಜಗದೀಶ ಕಕೆಬೆಟ್ಟು, ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ರಾಘವ ಬಿ.ರಾವ್, ಸಂಚಾಲಕ ಶ್ಯಾಮ್ ಪಾನತ್ತಿಲ, ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಮದುವೆಗದ್ದೆ, ಉಪಸ್ಥಿತರಿದ್ದರು.

ವೈಷವಿ ಮತ್ತು ವಿಷ್ಣುಪ್ರಿಯ ಪ್ರಾರ್ಥಿಸಿದರು.
ಶ್ಯಾಮ್ ಪಾನತ್ತಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಂದೀಪ್ ಮದುವೆಗದ್ದೆ ವಂದಿಸಿ, ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿದುಷಿ ಜಯಶ್ರೀ ಮದುವೆಗದ್ದೆ ಇವರ ತಂಡದಿಂದ ಭರತನಾಟ್ಯ, ಶ್ರೀ ಅಣ್ಣಪ್ಪ ಸ್ವಾಮಿ ಕಲಾ ತಂಡ ಮೈತಡ್ಕ ಇವರಿಂದ ಸಂಗೀತ ರಸಮಂಜರಿ ಮತ್ತು ಸ್ಯಾಕ್ಸೋಫೋನ್ ನಡೆಯಿತು.

ಇಂದು ಮಧ್ಯಾಹ್ನ ಮಹಾಪೂಜೆಯಾಗಿ, ಸಂಜೆ ಗಣೇಶನ ವೈಭವದ ಶೋಭಾಯತ್ರೆ, ಜಲಸ್ತಂಭನ ನಡೆಯಲಿದೆ.










