ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ, ವಿಜಯದಶಮಿ ಮಹೋತ್ಸವದ ಆಮಂತ್ರಣ ಬಿಡುಗಡೆ

0


ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಾಮೇಶ್ವರಿ ದೇವಸ್ಥಾನದಲ್ಲಿ ಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರ ತನಕ ನವರಾತ್ರಿ, ವಿಜಯದಶಮಿ ಮಹೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಆಗಸ್ಟ್ ೨೭ ರಂದು ದೇವಸ್ಥಾನದಲ್ಲಿ ಅರ್ಚಕ ವಿಶ್ವಾಸ್ ಭಟ್ ರವರ ಪೂಜಾ ಕಾರ್ಯದೊಂದಿಗೆ ಬಿಡುಗಡೆಗೊಂಡಿತು.


ಈ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ಟ್ರಸ್ಟ್ ನ ಅಧ್ಯಕ್ಷ ಡಿ ಎಸ್ ವಿದ್ಯಾಧರ, ನಿಕಟ ಪೂರ್ವಾಧ್ಯಕ್ಷ ಡಿ.ಎಸ್. ಗಿರೀಶ್, ಉತ್ಸವ ಸಮಿತಿ ಅಧ್ಯಕ್ಷ ಕೆ.ಕೆ. ಸೀತಾರಾಮ, ಕಾರ್ಯದರ್ಶಿ ಪ್ರಭಾಕರ ಎಸ್.ಎನ್. ಮತ್ತು ಸದಸ್ಯರು ಉಪಸ್ಥಿತರಿದ್ದರು.