ಅರಂಬೂರು ಅಂಬಿಕಾ ಮಹಿಳಾ ಮಂಡಲ ಇದರ ವಾರ್ಷಿಕ ಮಹಾಸಭೆ ಆ. 23 ರಂದು ಅರಂಬೂರು
ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು. ಮಹಿಳಾಮಂಡಲದ ಅಧ್ಯಕ್ಷೆ ಅಮಿತಾ ರೈ ಯವರು ಅಧ್ಯಕ್ಷತೆ ವಹಿಸಿದ್ದರು.















ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವೇದಾವತಿ ನೆಡ್ಚಿಲು ವಾಚಿಸಿದರು. 2024- 25 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರವನ್ನು ಹಾರಾವತಿ ಮಾಂಬುಳಿಯವರು ಮಂಡಿಸಿದರು. ಮುಂದಿನ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಚಂದ್ರಾವತಿ ಬದಿಕಾನ, ಉಪಾಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಕಾರ್ಯದರ್ಶಿ ವೇದಾವತಿ ನೆಡ್ಚಿಲು, ಜತೆ ಕಾರ್ಯದರ್ಶಿ ಹೇಮಾವತಿ ನೆಡ್ಚಿಲು, ಖಜಾಂಚಿ ಹಾರಾವತಿ ಮಾಂಬುಳಿ ಯವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ಉಷಾ ಚಂದ್ರಶೇಖರ, ಪ್ರಫುಲ್ಲ ರೈ, ಸತ್ಯಭಾಮ ಭಟ್, ಕವಿತಾ ಕುಡೆಕಲ್ಲು, ಜ್ಯೋತಿ ಪೈ,ಶೋಭಾ ರೈ, ಭಾರತಿ, ಅಂಬಿಕಾ, ಶೋಭಿತ, ದಿನವಣಿ,ಯಮಲಾಕ್ಷಿ ಇವರನ್ನು ಆಯ್ಕೆ ಮಾಡಲಾಯಿತು. ಯಮಲಾಕ್ಷಿ ಪ್ರಾರ್ಥಿಸಿದರು. ಚಂದ್ರಾವತಿ ಬದಿಕಾನ ಸ್ವಾಗತಿಸಿ, ಕವಿತಾ ಕುಡೇಕಲ್ಲು ಕಾರ್ಯಕ್ರಮ ನಿರೂಪಿಸಿದರು.










