ಕರ್ನಾಟಕ ಜಾನಪದ ಪರಿಷತ್ ದುಬೈ ಘಟಕದ ಉದ್ಘಾಟನಾ ಸಂದರ್ಭದಲ್ಲಿ ನಡೆಯುವ ಅಂತರಾಷ್ಟ್ರೀಯ ಜಾನಪದ ಉತ್ಸವದ ನಿರ್ದೇಶಕರನ್ನಾಗಿ ಬಾಸುಮ ಕೊಡಲು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದುಬೈ ಘಟಕದ ಅಧ್ಯಕ್ಷ ಸಾಧನ ದಾಸ್ ತಿಳಿಸಿದ್ದಾರೆ.















2025 ಸೆಪ್ಟೆಂಬರ್ 6 ಮತ್ತು 7 ರಂದು ದುಬೈ ಬಿಸಿನೆಸ್ ಬೇ ಯಲ್ಲಿರುವ ರಾಮಿ ಡ್ರೀಮ್ಸ್ ಹೋಟೆಲ್ ನಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಕರ್ನಾಟಕದ 10 ತಂಡಗಳು ಭಾಗವಹಿಸುತ್ತಿವೆ. ಕರ್ನಾಟಕದ ವಿವಿಧ ಪ್ರಕಾರಗಳ ಜಾನಪದ ಪ್ರದರ್ಶನಗಳನ್ನು ಅಲ್ಲಿ ದೇಶ ವಿದೇಶಗಳ ಪ್ರೇಕ್ಷಕರ ಮುಂದೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಬಾಸುಮ ಕೊಡಗು ದಂಪತಿಗಳು ಹಾಗೂ ಕುಟುಂಬ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.










