ಎಣ್ಮೂರು: ಗರಡಿಯಲ್ಲಿ ಚೌತಿ ಹಬ್ಬ , ಕದಿರು ಉತ್ಸವ, ದರ್ಶನ ಸೇವೆ, ತಂಬಿಲ

0

ಎಣ್ಮೂರು ಶ್ರೀ ಆದಿ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಪೂರ್ವ ಸಂಪ್ರದಾಯದಂತೆ ಪತ್ತನಾಜೆ ಕಾರ್ಯಕ್ರಮ ಮುಗಿದ ಮೇಲೆ ಬಾಗಿಲು ಹಾಕುವುದು ಸಂಪ್ರದಾಯ.ಬಾಗಿಲ ಹೊರಗೆ ಪ್ರಾರ್ಥನೆ ಸಲ್ಲಿಸುವುದು ಮಾತ್ರ. ಚೌತಿ ಹಬ್ಬದಂದು ನಿಯಮಾನುಸಾರವಾಗಿ ಬಾಗಿಲು ತೆರೆದು ತಂಬಿಲ ಸೇವೆ, ಹೋಮ, ಮಹಾಪೂಜೆ, ದರ್ಶನ ಸೇವೆ, ಹರಿಕೆ ಸೇವೆ, ಪ್ರಾರ್ಥನೆ, ಪ್ರಸಾದ ವಿತರಣೆ ನಡೆದು ತೆನೆಹಬ್ಬ ಬಳಿಕ ತೆನೆ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗರಡಿಯ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮ ಆರ್. ಶೆಟ್ಟಿ, ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಗರಡಿಯ ಮಾಹಿತಿದಾರ ಎನ್ ಜಿ ಲೋಕನಾಥ ರೈ, ಬೆಂಗಳೂರು ಉದ್ಯಮಿ ಅಶೋಕ್ ಕುಮಾರ್ ಶೆಟ್ಟಿ ಕಟ್ಟಬೀಡು, ನ್ಯಾಯವಾದಿ ರಾಧಾಕೃಷ್ಣ ರೈ ಕಟ್ಟಬೀಡು , ಪಂಜಿ ಮೊಗರು ಗುತ್ತು ರಘುನಾಥ ರೈ, ಅಲೆಂಗಾರ ಗುತ್ತು ರಘುನಾಥ ರೈ ಕೆ ಎನ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಮಕೃಷ್ಣ ರೈ ಪಜಿಂಬಿಲ, ಜಗನ್ನಾಥ ರೈ ಕುಲಾಯಿತೋಡಿ , ಜ್ಞಾನ ದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ದಂಪತಿಗಳು, ಸುಧೀರ್ ಕುಮಾರ್ ಶೆಟ್ಟಿ ಕೆ, ನಾಗೇಶ್ ಆಳ್ವ ಕಟ್ಟಬೀಡು , ಸುಜಿತ್ ರೈ ಪಟ್ಟೆ, ಮಣಿಮಜಲು ಗರಡಿಯ ದರ್ಶನ ಪಾತ್ರಿ ಲೋಕೇಶ್ ಸೇರಿದಂತೆ, ಕಟ್ಟಬೀಡು ಕುಟುಂಬಸ್ಥರು,ಊರ ಪರವೂರ ಭಕ್ತರು ಉಪಸ್ಥಿತರಿದ್ದರು.