ಕೆ ಎಫ್ ಡಿ ಸಿ ವಾಹನ ಚಾಲಕ ಬಸವರಾಜ್‌ರ ಮನೆಯಲ್ಲಿ ಗಣಪನಿಗೆ ೪೪ನೇ ವರ್ಷದ ಸಂಭ್ರಮ

0

ಅಧಿಕಾರಿಗಳು, ಬಂಧು ಮಿತ್ರರು ಭಾಗಿ, ಪುಟ್ಟ ಗಣಪನಿಗೆ ಪೂಜೆ-ಭಜನೆ

ಸುಳ್ಯ ಟೌನ್‌ಹಾಲ್ ಸಮೀಪ ಕೆ ಎಫ್ ಡಿ ಸಿ ಕ್ವಾಟ್ರಸ್‌ನಲ್ಲಿ ಕೆ ಎಫ್ ಡಿ ಸಿ ಚಾಲಕ ಬಸವರಾಜ್ ರವರ ಮನೆಯಲ್ಲಿ ಗಣಪನ ೪೪ ನೇ ವರ್ಷದ ಸಂಭ್ರಮ ನಡೆಯಿತು.
ಮನೆಯಲ್ಲಿ ಪೂಜಿಸುವ ಪುಟ್ಟ ಗಣೇಶನಿಗೆ ಅದ್ದೂರಿ ಪೂಜಾ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಬಂಧುಗಳ ಉಪಸ್ಥಿತಿಯಲ್ಲಿ ಭಕ್ತಿ ಪೂರಕವಾಗಿ ನಡೆಯಿತು.

ಕಳೆದ ೪೪ ವರ್ಷಗಳಿಂದ ಇವರು ಗಣೇಶನ ಪೂಜೆ ಮಾಡಿಕೊಂಡು ಬರುತ್ತಿದ್ದು, ಪುಟ್ಟ ಗಣಪನನ್ನು ಆ.೨೭ ರಂದು ಸಂಜೆ ಪ್ರತಿಷ್ಠಾಪಿಸಿ, ಪೂಜೆ , ಭಜನೆ ನಡೆಸಿದರು. ೫ ದಿನಗಳ ಬಳಿಕ ಈ ಪುಟ್ಟ ಗಣಪತಿಯ ಜಲಸ್ಥಂಭನ ನಡೆಯಲಿದೆ.

ಸ್ವತಃ ಬಸವರಾಜ್‌ರವರೇ ಪೂಜಾ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕೆ ಎಫ್ ಡಿ ಸಿ ರೆಂಜರ್ ಅರುಣ್, ಎ ಡಿ ಎಂ, ಸಹೋದರ ಶಿಲ್ಪಾಚಾರಿ, ಹಿರಿಯರಾದ ವೀರಭದ್ರಪ್ಪ, ಶ್ರೀಮತಿ ಸರಸ್ವತಿ, ಹಾಗೂ ಬಸವರಾಜ್ ರವರ ಪತ್ನಿ ಮಂಜುಳಾ ಬಡಿಗೇರ್, ಪುತ್ರ ರಾದ ಕೇದರೇಶ್, ಸಂಪತ್ ಕುಮಾರ್, ಪುತ್ರಿ ಲಕ್ಷ್ಮಿ, ಹಾಗೂ ಸಹೋದರ, ಸಹೋದರಿಯರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಅತಿಥಿಗಳಿಗೆ ಉಣಬಡಿಸಿದರು.