ಕುಕ್ಕುಜಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ ವತಿಯಿಂದ 33ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಗಸ್ಟ್ 26 ರಿಂದ ಆಗಸ್ಟ್ 28 ಗುರುವಾರದವರೆಗೆ ನಡೆಯಲಿದ್ದು ಆಗಸ್ಟ್ 27 ಬುಧವಾರ ವೇದಮೂರ್ತಿ ಶ್ರೀ ರಾಧಾಕೃಷ್ಣ ಭಟ್ ಜೋಗಿಯಡ್ಕ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮದ ಅಂಗವಾಗಿ ವಿಗ್ರಹ ಪ್ರತಿಷ್ಠೆ ನಡೆದು ಗಣಪತಿ ಹವನ ನಡೆಯಿತು ಸಮರ್ಪನ ಭಜನಾ ತಂಡ ಕುಕ್ಕು ಜಡ್ಕ ಮತ್ತು ಶ್ರೀ ಧರ್ಮಶಾಸ್ತ್ರ ಭಜನಾ ಮಂದಿರ ಪಿಲಿಕಜೆ ಇವರಿಂದ ಭಜನೆ ನಾಮ ಸಂಕೀರ್ತನೆ ನೆರವೇರಿತು.

ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು, ಧಾರ್ಮಿಕ ಉಪನ್ಯಾಸಕರಾಗಿ ಚಿದಾನಂದ ಯುಎಸ್ ನಿವೃತ್ತ ಮುಖ್ಯ ಶಿಕ್ಷಕರು ಗೂನಡ್ಕ ಆಗಮಿಸಿದ್ದರು.

ಧಾರ್ಮಿಕ ಸಭೆಯಲ್ಲಿ ಗ್ರಾಮದ ಸಾಧಕರಾದ ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿ ಮತ್ತು ಧ್ವನಿ ಮಾಯೆ ಕಲಾವಿದೆ ಸಾಯಿ ಶೃತಿ ಪಿಲಿಕಜೆ ಇವರನ್ನು ರಾಧಾಕೃಷ್ಣ ಬೊಳ್ಳೂರು ಸನ್ಮಾನಿಸಿದರು.

ಗಣೇಶೋತ್ಸವದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾಟ, ಹಗ್ಗ ಜಗ್ಗಾಟ, ಚಿತ್ರಕಲೆ, ಭಕ್ತಿಗೀತೆ,ಗೂಡು ದೀಪ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾ ಅಧ್ಯಕ್ಷತೆಯನ್ನು ಜನಾರ್ಧನ ಆಚಾರ್ಯ ಕುಂಟಿಕಾನ ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ ಇವರು ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೇಶವ ಗೌಡ ಕರ್ಮಜೆ ಅಧ್ಯಕ್ಷರು ಚೊಕ್ಕಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ, ವಿನಯ್ ಸಂಕೇಶ ಅಧ್ಯಕ್ಷರು ಎಸ್ ಡಿ ಎಂ ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕು ಜಡ್ಕ, ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಪುಂಡರೀಕ ಚಿಲ್ಪಾರು ಉಪಸ್ಥಿತರಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಮಹಾಪೂಜೆ ನಡೆದು ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬ್ರಾಹ್ಮರಿ ನಾಟ್ಯಾಲಯ ಕುಕ್ಕು ಜಡ್ಕ ವಿದುಷಿ ಜಯಶ್ರೀ ತೇಜಸ್ವಿ ಮತ್ತು ತಂಡದವರಿಂದ ನೃತ್ಯ ವೈಭವ ಮತ್ತು ಚಿತ್ತಾರ ಕಲಾವಿದರು ಎಲಿಮಲೆ ತಂಡದ ಸದಸ್ಯರಿಂದ ತುಳು ಹಾಸ್ಯಮಯ ನಾಟಕ “ಮಂಡೆ ಹಾಕೋಡ್ಚಿ” ನಡೆಯಿತು.