ಭರತನಾಟ್ಯ ಜೂನಿಯ‌ರ್ ಪರೀಕ್ಷೆ ಸಾನ್ವಿ ಡಿ.ಕೆ.ಗೆ ಶೇ.94 ಅಂಕ

0

ಮಂಗಳೂರಿನ ನೃತ್ಯ ಕಲಾ ಸಂಸ್ಥೆಯಾದ
ಸೌರಭ ಕಲಾ ಪರಿಷತ್ ಇದರ ನೃತ್ಯಗುರು ಡಾ.ಶ್ರೀವಿದ್ಯಾ ಮುರಳೀಧರ್ ಅವರ ಶಿಷ್ಯೆ ಕುಮಾರಿ ಸಾನ್ವಿ ಡಿ.ಕೆ. ಅವರು 2024-25 ನೇ ಸಾಲಿನ ಡಾ.ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾನಿಲಯ ಮೈಸೂರು ಆಯೋಜಿಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.94 ಅಂಕ ಪಡೆದಿರುತ್ತಾರೆ.

ಇವರು ಪೆರಾಜೆ ಗ್ರಾಮದ ಕುಂಬಳಚೇರಿ ದಿವಾಕರ್ ಹಾಗೂ ಶ್ರೀಮತಿ ಹರಿಣಾಕ್ಷಿ ದಿವಾಕರ್ ಅವರ ಪುತ್ರಿಯಾಗಿದ್ದು, ಶಾರದಾ ವಿದ್ಯಾಲಯ ಮಂಗಳೂರು ಇಲ್ಲಿನ 8ನೇ ತರಗತಿ ವಿದ್ಯಾರ್ಥಿನಿ.