














2024-25 ನೇ ಸಾಲಿನಲ್ಲಿ ಶೆ. 100 ಸಾಲ ವಸೂಲಾತಿಗಾಗಿ ಕನಕಮಜಲು ಪ್ರಾಥಮಿಕ ಸಹಕಾರಿ ಸಂಘಕ್ಕೆ ಜಿಲ್ಲಾ ಬ್ಯಾಂಕ್ ಪ್ರಶಸ್ತಿ ದೊರಕಿದೆ. ಆ. 30 ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಯಂ.ಎನ್ ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷರಾದ ಸುಧಾಕರ ಕಾಮತ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್‌ಕುಮಾರ್ ಕುದ್ಕುಳಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ವೆಂಕಪ್ಪ ನಾಯ್ಕ ದೇರ್ಕಜೆ, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್, ಕುಸುಮಾಧರ ಅರ್ಭಡ್ಕ, ಗಂಗಾಧರ ಕಾಳಮನೆ, ತಿಲೋತ್ತಮ ಕೊಲ್ಲಂತ್ತಡ್ಕ, ಸುನಿಲ್ ಅಕ್ಕಿಮಲೆ, ನಿರಂಜನ ಬೊಳುಬೈಲು, ದಮಯಂತಿ ಕೋನಡ್ಕ ಪದವು, ವಿನುತಾ ಸಾರಕೂಟೇಲು, ಸಂಘದ ಮಾಜಿ ಅಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ್ ಪಿ.ಆರ್ ಉಪಸ್ಥಿತರಿದ್ದರು.










