ಪಂಜದ ಐವತ್ತೊಕ್ಲು ಗ್ರಾಮದ ಕಂರ್ಬು ನೆಕ್ಕಿಲ ಲೇಖನ್ ರವರು ಎ.ಇ.ಎಂ.ಎ. ಹಾಂಕ್ ಕಾಂಗ್, ಮಾಲಕತ್ವದ ಶಿಪ್ಪಿಂಗ್ ಕಂಪೆನಿಯಲ್ಲಿ ಕೆಡೆಟ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.















ಇವರು ಮಂಗಳೂರಿನ ಸಹ್ಯಾದ್ರಿ ಕಾಲೇಜ್
ಆಫ್ ಎಂಜಿನಿಯರಿಂಗ್ ನ ಮೆಕ್ಯಾನಿಕಲ್ ಎಂಜಿನಿಯರಿಂಗ್
ವಿಭಾಗದಲ್ಲಿ ಬಿ.ಇ.ಪದವಿಯನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ
ಕಂಪೆನಿಯವರು ನಡೆಸಿದ ಪ್ರವೇಶ
ಪರೀಕ್ಷೆಯಲ್ಲಿ ಆಯ್ಕೆಯಾಗಿ ಮುಂಬಯಿಯ ಎ.ಇ .ಎಂ.ಅಕಾಡೆಮಿಯಲ್ಲಿ
ಒಂದು ವರ್ಷದ ವೃತ್ತಿಪೂರ್ವ
ತರಬೇತಿಯನ್ನು ಪೂರೈಸಿದ್ದಾರೆ.
ಇದೀಗ ಅಮೇರಿಕಾದ ಪ್ರಾವಿಡೆನ್ಸ್
ನಲ್ಲಿ ಆಫ್ ಶೋರ್ ವಿಭಾಗದ
ಕೆಡೆಟ್ ಎಂಜಿನಿಯರ್ ಆಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಲೇಖನ್ ಕೆ.ಎನ್ ರವರು ಬೆಳ್ಳಾರೆ ಕೆ.ಪಿ.ಎಸ್. ಪ್ರಾಂಶುಪಾಲರಾಗಿರುವ ಪಂಜ
ಐವತ್ತೊಕ್ಲು ಗ್ರಾಮದ ಕಂರ್ಬು ನೆಕ್ಕಿಲ ಜನಾರ್ದನ ಕೆ.ಎನ್.
ಹಾಗೂ ನಿರ್ಮಲಾಕ್ಷಿ ದಂಪತಿ
ಪುತ್ರನಾಗಿದ್ದು ತನ್ನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ
ವನ್ನು ಕಡಬದ ಸೈಂಟ್ ಜೋಕಿಮ್ಸ್
ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದರು.










