ಮೆಟ್ಟಿನಡ್ಕದ ಯುವಕ ಆಸಿಡ್ ಸೇವಿಸಿ ಆತ್ಮಹತ್ಯೆ – ಚಿಕಿತ್ಸೆ ಫಲಿಸದೆ ಮೃತ್ಯು

0

ನಾಲ್ಕೂರು ಗ್ರಾಮದ ಮೆಟ್ಟಿನಡ್ಕದ ಯುವಕನೋರ್ವ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಆ.೨೬ ರಂದು ವರದಿಯಾಗಿದೆ. ಆತನಿಗೆ ೩೨ ವರ್ಷ ವಯಸ್ಸಾಗಿತ್ತು.

ಮೂಲತಃ ಕೊಲ್ಲಮೊಗ್ರದವರಾಗಿದ್ದ ಸತೀಶ್ ಎಂಬ ಯುವಕ ಮೆಟ್ಟಿನಡ್ಕದ ಯುವತಿಯನ್ನು ಮದುವೆಯಾಗಿ ಅಲ್ಲಿ ವಾಸವಿದ್ದ. ಕುಡಿತದ ಚಟಕ್ಕೆ ಬಿದ್ದಿದ್ದ ಆತ ಬಳ್ಪದ ಕಡೆ ಮನೆಯೊಂದರಲ್ಲಿ ಕೆಲಸಕಿದ್ದನೆನ್ನಲಾಗಿದೆ. ಇತ್ತೀಚೆಗೆ ಹೃದಯ ಸಂಬಂಧಿಸಿದ ಅನಾರೋಗ್ಯ ಉಂಟಾಗಿ ಸುಳ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಆ.೨೫ ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ.


ಅಂದು ಸಂಜೆ ಸುಳ್ಯದ ಬಿಎಸ್‌ಎನ್‌ಎಲ್ ಕಚೇರಿ ಬಳಿ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿರುವುದನ್ನು ಸಾರ್ವಜನಿಕರು ಗಮನಿಸಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರೆನ್ನಲಾಗಿದೆ. ಆದರೆ ಅಲ್ಲಿ ಅವನು ಆ.೨೬ ರಂದು ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾನೆ.
ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ. ಮೃತರು ತಾಯಿ, ಪತ್ನಿ ಸ್ಪಂದನಾ, ಮಕ್ಕಳಾದ ಆರಾಧ್ಯ, ಸಾನಿದ್ಯ ಹಾಗೂ ಬಂಧುಗಳು ಅಗಲಿರುವುದಾಗಿ ತಿಳಿದು ಬಂದಿದೆ.