ಯಾದವಸಭಾ ತಾಲೂಕು ಸಮಿತಿ ಸುಳ್ಯ, ಪ್ರಾದೇಶಿಕ ಸಮಿತಿ ಸುಬ್ರಹ್ಮಣ್ಯ ಇದರ ವಾರ್ಷಿಕ ಮಹಾಸಭೆ

0

ನೂತನ ಸಮಿತಿ ರಚನೆ

ಯಾದವಸಭಾ ತಾಲೂಕು ಸಮಿತಿ ಸುಳ್ಯ, ಪ್ರಾದೇಶಿಕಸಮಿತಿ ಸುಬ್ರಹ್ಮಣ್ಯ ಇದರ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಬಲ್ಪ ಯುವಕಮಂಡಲ ಸಭಾಭಾವನದಲ್ಲಿ ಆ.೩೧ರಂದು ಸಮಿತಿಯ ಅಧ್ಯಕ್ಷ ನಾರಾಯಣ ಮಣಿಯಾಣಿ ಬೀದಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯರಾದ ವಾಸು ಮಣಿಯಾಣಿ ಬಲ್ಪ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಿತಿ ಕಾರ್ಯದರ್ಶಿ ಹರ್ಷಿತಾ ಸುಬ್ರಮಣ್ಯ ವಾರದಿವಾಚನ ಮತ್ತು ಲೆಕ್ಕಪತ್ರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ, ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವಾರ್ಪಣೆ ನಡೆಯಿತು. ನಂತರ ೨೦೨೫-೨೮ರ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ ಜೀವನ್, ಉಪಾಧ್ಯಕ್ಷರಾಗಿ ಗೋಪಾಲ ಮಣಿಯಾಣಿ ಬಲ್ಪ, ಕಾರ್ಯದರ್ಶಿ ಯಾಗಿ ಹರ್ಷಿತಾ ಸುಬ್ರಮಣ್ಯ, ಜತೆಕಾರ್ಯದರ್ಶಿಯಾಗಿ ರಾಮಚಂದ್ರ ಕುಲ್ಕುಂದ, ಕೋಶಾಧಿಕಾರಿಯಾಗಿ ಶ್ರೀಮತಿ ಜಲಪುಷ್ಪ ಚಾಲ್ಯಾರು ಸೇರಿದಂತೆ ಒಟ್ಟು ಹನ್ನೊಂದು ಸದಸ್ಯರುಳ್ಳ ಸಮಿತಿಯನ್ನು ರಚಿಸಲಾಯಿತು. ತಾಲೂಕು ಸಮಿತಿ ಉಸ್ತುವಾರಿಗಳಾಗಿ ದಾಮೋದರ ಕೇನಾಜೆ ಮತ್ತು ಅಚ್ಚುತ ಅಲೆಟ್ಟಿ ಸುಬ್ರಮಣ್ಯ ಸಹಕರಿಸಿದರು.ಹರ್ಷಿತಾ ಸುಬ್ರಮಣ್ಯ ಇವರು ಕಾರ್ಯಕ್ರಮ ನಿರೂಪಿಸಿದರು.