ಸುಬ್ರಹ್ಮಣ್ಯದಲ್ಲಿ 55ನೇ ವರ್ಷದ ಶ್ರೀ ಗಣೇಶೋತ್ಸವ

0

ಇಂದು “ಯಕ್ಷ ತೆಲಿಕೆ.. ತೆಲಿಕೆದ ಬರ್ಸ” ಕಾರ್ಯಕ್ರಮ, “ಪುದ‌ರ್ ದೀತಿಜಿ” ಹಾಸ್ಯಮಯ ತುಳು ನಾಟಕ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಸೆ‌.2 ರ ವರಗೆ ನಡೆಯುತಿದ್ದು ಇಂದು ಆರನೇ ದಿನ ಸೆ.1 ರಂದು ಅಕ್ಷರ ಗಾನಸುಧೆ ಸುಬ್ರಹ್ಮಣ್ಯ ಪ್ರಸ್ತುತ ಪಡಿಸುವ “ಭಕ್ತಿ ಭಾವ ಗಾಯನ” ಅಪರಾಹ್ನ 1 ಗಂಟೆಯಿಂದ ನಡೆದು, ಬಳಿಕ 3.30 ರಿಂದ 04.30 ಧಾರ್ಮಿಕ ಸಭೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಸಂಜೆ ಗಂಟೆ 5 ರಿಂದ ಕುಸಲ್ದ ಗುರಿಕಾರೆ ದಿನೇಶ್ ಕೋಡಪದವು ಸಾರಥ್ಯದಲ್ಲಿ “ಯಕ್ಷ ತೆಲಿಕೆ.. ತೆಲಿಕೆದ ಬರ್ಸ” ನಡೆಯಲಿದೆ. ರಾತ್ರಿ 7 ರಿಂದ ಕಾಪಿಕಾಡ್, ಪಡೀಲ್, ವಾಮಂಜೂರ್, ಸಾಯಿಕೃಷ್ಣ ಅಭಿನಯದಲ್ಲಿ “ಪುದ‌ರ್ ದೀತಿಜಿ ಹಾಸ್ಯಮಯ ತುಳು ನಾಟಕ ನಡೆಯಲಿದೆ .