ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಿಶಿಷ್ಟ ಸಾಧನೆಗೆ ೬ ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ

0

ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು ೧೫ ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ದರ್ಬೆ ಪುತ್ತೂರು ಇದರ ೨೦೨೪-೨೫ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ೬ನೇ ಬಾರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಆಗಸ್ಟ್ ೩೦ ರಂದು ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ಮಹಾ ಸಭೆಯಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಕೆ ಸೀತಾರಾಮ ರೈ ಸವಣೂರು ಇವರ ಪರವಾಗಿ ಸಂಘದ ನಿರ್ದೇಶಕಾರದ ಅಶ್ವಿನ್ ಎಲ್ ಶೆಟ್ಟಿ ಮತ್ತು ಮಹಾ ಪ್ರಬಂಧಕರಾದ ವಸಂತ್ ಜಾಲಾಡಿ ರವರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೂಟ್ಟು, ಕೆ.ಜೈರಾಜ್ ಬಿ ರೈ, ಎಸ್.ಬಿ.ಜಯರಾಮ್ ರೈ, ಭಾಸ್ಕರ ಎಸ್ ಕೋಟ್ಯಾನ್,ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್ ಎನ್, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿದೇಶಕರುಗಳಾದ ಪೂರ್ಣಿಮಾ ಎಸ್ ಆಳ್ವ, ರಶ್ಮಿ ಎಸ್ ರೈ ಉಪಸ್ಥಿತರಿದ್ದರು.