ಕಲ್ಚರ್ಪೆ ಸಿರಿಕುರಲ್ ನಗರದಲ್ಲಿ ಕಾಡಾನೆ ದಾಳಿ ಕೃಷಿ ನಾಶ

0

ಆನೆಗಳ ಹಾವಳಿ ನಿಯಂತ್ರಣಕ್ಕೆ ಸ್ಥಳೀಯರಿಂದ ಆಗ್ರಹ

ಆಲೆಟ್ಟಿ ಗ್ರಾಮದ ಕಲ್ಚರ್ಪೆ ಸಿರಿಕುರಲ್ ನಗರದಲ್ಲಿ ನಿನ್ನೆ ರಾತ್ರಿ ಕಾಡಾನೆ ಹಿಂಡು ದಾಳಿ ಮಾಡಿ ಅಪಾರ ಕೃಷಿ ನಾಶ ಹೊಂದಿದೆ.

ಸಿರಿಕುರಲ್ ನಗರ ನಿವಾಸಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್ ರವರ ತೆಂಗಿನ ಮರಗಳು ಸೇರಿದಂತೆ ಸ್ಥಳೀಯ ನಿವಾಸಿಗಳ ಕೃಷಿ ಬೆಳೆಗಳು ಕಾಡಾನೆ ದಾಳಿಯಿಂದ ನಾಶವಾಗಿದೆ. ಅಪಾರ ನಷ್ಟ ಅನುಭವಿಸಿದ ಕೃಷಿಕರು ಕಾಡಾನೆ ದಾಳಿಗೆ ಶಾಶ್ವತ ಪರಿಹಾರದ ವ್ಯವಸ್ಥೆ ಕೈಗೊಳ್ಳುವಂತೆ ಅರಣ್ಯ ಇಲಾಖೆಯವರನ್ನು ಆಗ್ರಹಿಸಿದ್ದಾರೆ.