ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿ ದೇಶದ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವುದು ಗ್ರಾಮಸ್ಥರಿಗೆ ಹೆಮ್ಮೆ – ಎಸ್.ಎನ್.ಮನ್ಮಥ

ಬಿ .ಎಸ್. ಎಫ್ ಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಹಾಗೂ ತರಬೇತಿ ನೀಡಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈಯವರಿಗೆ ಐವರ್ನಾಡು ಗ್ರಾಮಸ್ಥರಿಂದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವು ಸೆ.04 ರಂದು ಐವರ್ನಾಡು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥರವರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಎಸ್.ಎನ್.ಮನ್ಮಥರವರು ಮಾತನಾಡಿ ಬೆದ್ರುಪಣೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಬೆಳೆದ ಹೆಣ್ಣುಮಗಳು ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವುದು ನಮಗೆ ಹಾಗೂ ಗ್ರಾಮಸ್ಥರಿಗೆಲ್ಲ ಹೆಮ್ಮೆ ತಂದಿದೆ.
ಬಹಳಷ್ಟು ಶ್ರಮಪಟ್ಟು ಮನೆಯವರನ್ನು ಕೂಡ ನೋಡಿಕೊಂಡಿದ್ದ ಇವರ ಪರಿಶ್ರಮ ಶ್ಲಾಘನೀಯವಾದುದು.
ದೇಶ ಕಾಯುವ ಕೆಲಸಕ್ಕೆ ಹೋಗುವಾಗ ಐವರ್ನಾಡಿನ ಜನತೆ ಇವತ್ತು ಸನ್ಮಾನಿಸುತ್ತಿದ್ದೇವೆ ಎಂದು ಹೇಳಿ ಇವರ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.
















ಸನ್ಮಾನ ಸ್ವೀಕರಿಸಿದ ಸುಶ್ಮಿತಾರವರು ತನ್ನ ವಿದ್ಯಾಭ್ಯಾಸದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸನ್ಮಾನ ಸಮಿತಿ ಸಂಚಾಲಕ ಕುಸುಮಾಧರ ಮಡ್ತಿಲ,ಸಹಸಂಚಾಲಕ ಶಿವಪ್ರಸಾದ್ ಕಟ್ಟತ್ತಾರು,ಹಿರಿಯರು ನಿವೃತ್ತ ಯೋಧರಾದ ವೀರಪ್ಪ ಗೌಡ ಮಡ್ತಿಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ,ಹಿರಿಯರಾದ ಮಾಧವ ಭಟ್ ಶೃಂಗೇರಿ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.
ಸಹಕಾರಿ ಸಂಘದ ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿದರು.
ಬಾಲಕೃಷ್ಣ ಕೀಲಾಡಿ ವಂದಿಸಿದರು.










