ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್ ತೆರೆಯಲು ಚಿಂತನೆ : ಸದಸ್ಯರಿಗೆ ಶೇ. 7.5 ಡಿವಿಡೆಂಡ್
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.4ರಂದು ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ರ ಅಧ್ಯಕ್ಷತೆಯಲ್ಲಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ವರದಿ ಸಾಲಿನಲ್ಲಿ 194 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು, 50 ಲಕ್ಷದ 34 ಸಾವಿರ ಲಾಭಗಳಿಸಿದೆ. ಸದಸ್ಯರಿಗೆ ಶೇ.7.5 ಡಿವಿಡೆಂಡ್ ವಿತರಿಸಲಾಗುತ್ತದೆ ಎಂದು ಅಧ್ಯಕ್ಷರು ಘೋಷಿಸಿದರು.















ಸಂಘದ ಉಪಾಧ್ಯಕ್ಷ ಪುರುಷೋತ್ತಮ ಕಾಡುಸೊರಂಜ, ನಿರ್ದೇಶಕರುಗಳಾದ ಕೇಶವಮೂರ್ತಿ ಹೆಬ್ಬಾರ್, ಲಿಂಗಪ್ಪ ಬದಿಕಾನ, ಲಕ್ಷ್ಮಣ ಉಗ್ರಾಣಿಮನೆ, ಕುಸುಮ ದೇವರಗುಂಡ, ಜಯಶ್ರೀ ಚೌಟಾಜೆ, ಉಮೇಶ್ ಮಂಡೆಕೋಲು, ಸದಾನಂದ, ಶಶಿಧರ ಕಲ್ಲಡ್ಕ, ರಾಜಣ್ಣ ಪೇರಾಲುಮೂಲೆ, ಆಶಿಕ್ ದೇವರಗುಂಡ ಉಪಸ್ಥಿತರಿದ್ದರು. ಆಂತರಿಕ ಲೆಕ್ಕಪರಿಶೋಧಕರಾದ ಅನಂತಕೃಷ್ಣ ಚಾಕೋಟೆ ವೇದಿಕೆಯಲ್ಲಿ ಇದ್ದರು. ರೈತ ಉತ್ಪಾದಕ ಕಂಪೆನಿಯ ನಿರ್ದೇಶಕಿ ಮಧುರಾ ಎಂ.ಆರ್. ಕಾಫಿ ಬೆಳೆಯ ಮಾಹಿತಿ ನೀಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಆಯವ್ಯಯ ಮಂಡಿಸಿದರು. ನಿರ್ದೇಶಕರಾದ ಲಕ್ಷ್ಮಣ ಉಗ್ರಾಣಿಮನೆ ಸ್ವಾಗತಿಸಿದರು. ಕೇಶವಮೂರ್ತಿ ಹೆಬ್ಬಾರ್ ವಂದಿಸಿದರು. ಶ್ರೀಕಾಂತ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ನಿಧಿ ವಿತರಣೆ ನಡೆಯಿತು.










