ಶ್ರೀ ಸರ್ವೇಜನಾ. ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ನಾಗರ ಬಾವಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಭಾಗಿತ್ವದಲ್ಲಿ ಆ. 31 ರಂದು ಸವಾಯಿ ಗಂಧರ್ವ ಕಲಾಮಂದಿರ ಹುಬ್ಬಳ್ಳಿಯಲ್ಲಿ ಯೋಗ ಪಟು ಗೌರಿತಾ ಕೆಜಿ ಗೆ ಕರುನಾಡ ತಾರೆ ರಾಜ್ಯ ಪ್ರಶಸ್ತಿ
ಪ್ರಧಾನ ಮಾಡಲಾಯಿತು.















ಗೌರಿತಾ ಇದುವರೆಗೆ ಯೋಗದಲ್ಲಿ ಮಾಡಿದ 15 ದಾಖಲೆಗಳನ್ನು ಪರಿಶೀಲಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಿರುತರೆ ನಟಿ ಹಾಗೂ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದು ಅವರ ಸಮ್ಮುಖದಲ್ಲಿ ಗೌರಿತಾ ಅವರು ಯೋಗ ನೃತ್ಯ ಪ್ರದರ್ಶ ನ ನೀಡಿದರು. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 5ನೇ ತರಗತಿಯಲ್ಲಿ ಓದುತ್ತಿರುವ ಗೌರಿತಾ ಕೆ ಜಿ , ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿ ಪುತ್ರಿ.










