ಸದಸ್ಯರಿಗೆ ಶೇ. 11 ಡಿವಿಡೆಂಟ್ ವಿತರಣೆ
ಯುವ ಕೃಷಿಕರ ಗುರುತಿಸುವಿಕೆ – ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಹೆಚ್ಚು ವ್ಯವಹಾರ ಮಾಡಿದ ಕೃಷಿಕರಿಗೆ ಗೌರವರ್ಪಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಇಂದು ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ವರದಿ ಮಂಡಿಸಿದರು.
ಸಭೆಯಲ್ಲಿ ಸದಸ್ಯರಿಗೆ ಶೇ. 11 ಡಿವಿಡೆಂಟ್ ವಿತರಿಸುವುದಾಗಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು ಘೋಷಿಸಿದರು.
















ಬಳಿಕ ವರದಿಯ ಮೇಲೆ ಚರ್ಚೆ ನಡೆದು ಅನುಮೋದನೆ ಪಡೆಯಲಾಯಿತು.

ಬಳಿಕ ಯುವ ಕೃಷಿಕರ ಗುರುತಿಸುವಿಕೆ – ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಹೆಚ್ಚು ವ್ಯವಹಾರ ಮಾಡಿದ ಕೃಷಿಕರಿಗೆ ಗೌರವರ್ಪಣೆ ನಡೆಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಸಚಿನ್ ಬಳ್ಳಡ್ಕ, ನಿರ್ದೇಶಕ ರಾದ ಜಯರಾಮ ಪಿ. ಸಿ., ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಕರುಣಾಕರ ಪಾರೆಪ್ಪಾಡಿ, ಚಂದ್ರಶೇಖರ ಗುಡ್ಡೆ, ಶ್ರೀಮತಿ ಪ್ರವೀಣ ಯತೀಂದ್ರನಾಥ, ಶ್ರೀಮತಿ ಶಕುಂತಳ ಕೇವಳ, ಶಿವರಾಮ ಆಚಾರಿ ಸಿ. ಎಚ್., ಆನಂದ ಎಸ್., ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.












