ಅರಂತೋಡು ಜಮಾಅತ್ ವತಿಯಿಂದ ಡಿ.ಜಿ.ಎಂ ಆಗಿ ಪದೋನ್ನತಿಗೊಂಡ ಅಜೀಝ್ ಪೆಲ್ತಡ್ಕ ರಿಗೆ ಸನ್ಮಾನ

0


ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪನಿ ಲಾರ್ಸನ್ ಆಂಡ್ ಟೂಬ್ರೋ ಹೈಡ್ರೋಕಾರ್ಬನ್ ವಿಭಾಗದಲ್ಲಿ ಹಿರಿಯ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ ಅರಂತೋಡು ಜಮಾತ್ ಸೌದಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಜೀಝ್ ಪೆಲ್ತಡ್ಕರವರನ್ನು ಅರಂತೋಡು ಜಮಾಅತ್ ವತಿಯಿಂದ ಸೆ.5 ರಂದು ಮಿಲಾದ್ ನ್ನೆಬಿ ಸಮಾರಂಭದಲ್ಲಿ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಬ್ದುಲ್ ಖಾದರ್ ಪಠೇಲ್, ಅಮೀರ್ ಕುಕ್ಕುಂಬಳ, ಸಂಶುದ್ಧೀನ್ ಪೆಲ್ತಡ್ಕ , ಎಸ್.ಎಂ ಅಬ್ದುಲ್ ಮಜೀದ್, ಪಸೀಲು ಮೊದಲಾದವರು ಉಪಸ್ಥಿತರಿದ್ದರು.