ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸ್ಪಂದಿಸಲು ಸರಸ್ವತಿ ಬೊಳಿಯಮಜಲು ಮನವಿ
ಮೂಲತಃ ಪಂಜ ಸಮೀಪದ ಕೇನ್ಯದ ಧನ್ಯಶ್ರೀ ಎಂಬ ಮಹಿಳೆ ತೀವ್ರ ಜ್ವರದಿಂದ ಬಳಲಿ ಸುಳ್ಯ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.















ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರುಗಳು ಸೂಚಿಸಿದ್ದು, ಮಹಿಳೆ ಸದ್ಯ ಒಂಟಿ ಜೀವನ ನಡೆಸುತ್ತಿರುವ ಕಾರಣ ಅವರ ಜೊತೆ ಮಂಗಳೂರು ಆಸ್ಪತ್ರೆಗೆ ಹೋಗಲು ಯಾರು ಇಲ್ಲದ ಕಾರಣ ಸಮಸ್ಯೆಯಲ್ಲಿದ್ದಾರೆ.
ಈಕೆಗೆ ಸಣ್ಣ ಪ್ರಾಯದ ಇಬ್ಬರು ಗಂಡು ಮಕ್ಕಳಿದ್ದು ಮಕ್ಕಳನ್ನು ತಾತ್ಕಾಲಿಕವಾಗಿ ಸುಳ್ಯ ಮಹಿಳಾ ಸಮಾಜದಲ್ಲಿ ಬಿಡಲಾಗಿದೆ.
ದಲಿತ ಸಂಘಟನೆಯ ನಾಯಕಿ ಶ್ರೀಮತಿ ಸರಸ್ವತಿ ಬೊಳಿಯಮಜಲು ರವರು ಆಸ್ಪತ್ರೆಯಲ್ಲಿ ರೋಗಿಯ ಬಳಿ ಇದ್ದು ರೋಗಿಯ ಮುಂದಿನ ಚಿಕಿತ್ಸೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.










