ಸುಳ್ಯ :ವಿದ್ಯಾಮಾತಾ ದಲ್ಲಿ ತರಬೇತಿ ಪಡೆದು ಬಿ .ಎಸ್. ಎಫ್ ಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆಯವರಿಗೆ ಸನ್ಮಾನ

0

ಶ್ರದ್ಧೆ ಮತ್ತು ಪರಿಶ್ರಮದ ಫಲವಾಗಿ ಸುಶ್ಮಿತಾರ ಆಯ್ಕೆ: ಭಾಗ್ಯೇಶ್ ರೈ

ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದಿದ್ದು ಇದೀಗ
ಬಿ .ಎಸ್. ಎಫ್ ಗೆ ಆಯ್ಕೆಯಾದ ಕು.ಸುಶ್ಮಿತಾ ಬೆದ್ರುಪಣೆಯವರಿಗೆ ಸುಳ್ಯದ ವಿದ್ಯಾಮಾತಾ ಅಕಾಡೆಮಿಯಲ್ಲಿ ಸನ್ಮಾನ ಕಾರ್ಯಕ್ರಮವು ಸೆ.07 ರಂದು ವಿದ್ಯಾಮಾತಾ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.
ಕು.ಸುಶ್ಮಿತಾ ಬೆದ್ರುಪಣೆಯವರಿಗೆ ಗಣ್ಯರು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ,
ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.


ಸನ್ಮಾನ ಸ್ವೀಕರಿಸಿದ ಸುಶ್ಮಿತಾರವರು ತನ್ನ ಅನಿಸಿಕೆ ವ್ಯಕ್ತಪಡಿಸಿ, ವಿದ್ಯಾಮಾತಾ ಅಕಾಡೆಮಿಯು ನನ್ನ ಕನಸಿಗೆ ಅಡಿಪಾಯ ಹಾಕಲು ಸಹಾಯ ಮಾಡಿದೆ, ಇಲ್ಲಿ ಪಡೆದ ಅತ್ಯುತ್ತಮ ತರಬೇತಿಯಿಂದ ನನ್ನ ಕನಸು ನನಸಾಗಲು ಸಾಧ್ಯವಾಗಿದೆ ಎಂದು ಸಂಸ್ಥೆ ಗೆ
ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಸುಳ್ಯ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯ ತರಬೇತಿಯ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.
ವೇದಿಕೆಯಲ್ಲಿ‌ ನಿವೃತ್ತ ವೈದ್ಯಾಧಿಕಾರಿ ಡಾ.ರಂಗಯ್ಯ,ವಿದ್ಯಾಮಾತಾ ಆಕಾಡೆಮಿಯ
ಸಲಹಾ ಸಮಿತಿಯ ಸದಸ್ಯರಾದ ಪ್ರೊ.ಬಾಲಚಂದ್ರ ಗೌಡ, ವಿದ್ಯಾಮಾತಾ ಮುಖ್ಯಸ್ಥ ಭಾಗ್ಯೇಶ್ ರೈ, ಪಿ.ಆರ್.ಒ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು. ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಭಾಗ್ಯೇಶ್ ರೈ ಮಾತನಾಡಿ ಸುಶ್ಮಿತಾರವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯಾಗಿ ನಮ್ಮಲ್ಲಿ 2022 ಸಾಲಿನಲ್ಲಿ ತರಬೇತಿ ಪಡೆದಿದ್ದು ಸತತ ಪರಿಶ್ರಮ ಮತ್ತು ಶ್ರದ್ದೆಯಿಂದ ತನ್ನ ಗುರಿ ಸಾಧನೆ ಮಾಡಿದವರು. ದೈಹಿಕ ಕ್ಷಮತೆಯನ್ನೂ ಕಾಪಾಡಿಕೊಂಡು ಬಂದಿದ್ದಾರೆ. ಹಳ್ಳಿಗಾಡಿನ ಹುಡುಗಿಯಾಗಿ ಕಠಿಣ ಪರಿಶ್ರಮದ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.


ಶಾರದಾ ಕಾಲೇಜಿನ ಉಪನ್ಯಾಸಕರಾದ ಸ್ವರ್ಣ ಕಲಾ, ಎಸ್.ಎಂ.ಬಾಪು ಸಾಹೇಬ್, ನಂದರಾಜ್ ಸಂಕೇಶ್ , ಮಮತಾ ರವೀಶ್, ಚೆನ್ನಕೇಶವ ಜಾಲ್ಸೂರು, ರಾಮಚಂದ್ರ ಪಲ್ಲತ್ತಡ್ಕ, ಪುತ್ತೂರಿನ ಬೆಥೆನಿ ಶಾಲಾ ಶಿಕ್ಷಕಿ ಚಂದ್ರಪ್ರಭಾ ,ಪದ್ಮಾ ರಂಗನಾಥ್
ಹಾಗೂ ವಿದ್ಯಾಮಾತಾದ ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.