ಪತ್ರಕರ್ತರಾದ ಹರೀಶ್ ಬಂಟ್ವಾಳ್ ಮತ್ತು ಪಿ.ಬಿ.ಹರೀಶ್ ರೈ ಅವರಿಗೆ ಸನ್ಮಾನ
ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಕೆ.ವಿ.ಜಿ. ವೈದ್ಯಕೀಯ ಆಸ್ಪತ್ರೆ ಮತ್ತು ಮಹಾವಿದ್ಯಾಲಯ ಸುಳ್ಯ , ಸುದ್ದಿ ಸುಳ್ಯ ಹಬ್ಬ ಸುಬ್ರಹ್ಮಣ್ಯ ಗ್ರಾಮ ಸಮಿತಿ ಮತ್ತು ಇತರ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ಸೆ.7 ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು.
















ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ನಿರ್ಮಿಸಲಾಗಿರುವ ನೂತನ ಧರ್ಮ ಸಮ್ಮೇಳನ ಮಂಟಪದಲ್ಲಿ ಕಾರ್ಯಕ್ರಮ ಜರುಗಲಿದ್ದು ಸಂಪುಟ ನರಸಿಂಹ ಶ್ರೀಸುಬ್ರಹ್ಮಣ್ಯ ಸ್ವಾಮಿ ಮಠದ
ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ, ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಎಲುಬು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ರಂಗನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು.

ಪತ್ರಕರ್ತರಿಗೆ ಸನ್ಮಾನ
ಇದೇ ಸಂದರ್ಭ ಸುದ್ದಿ ಬಿಡುಗಡೆ ವಾರಪತ್ರಿಕೆಯ ಸಂಪಾದಕರಾದ ಅಧ್ಯಕ್ಷ ಹರೀಶ್ ಬಂಟ್ವಾಳ್ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿರುವ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪಿ.ಬಿ.ಹರೀಶ್ ರೈಯವರನ್ನು ಪತ್ರಿಕಾರಂಗದಲ್ಲಿ ಅವರು ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ
ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ಅಧ್ಯಕ್ಷ ಎಚ್.ಎಲ್.ವೆಂಕಟೇಶ್, ಸುದ್ದಿ ಸುಳ್ಯ ಹಬ್ಬ ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಮೂಲೆಮಜಲು, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಲ.ವಿಮಲಾ ರಂಗಯ್ಯ, ಕುಕ್ಕೆಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಲ್ಕುಂದ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಗುಣವತಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಸೇವಾಪ್ರತಿನಿಧಿ ಹರಿಣಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸೇವಾದೀಕ್ಷಿತೆ ಲತಾ, ವಾಣಿ ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಾ, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎನ್., ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಜ್ಞೇಶ್ ಆಚಾರ್ ವೇದಿಕೆಯಲ್ಲಿದ್ದರು.
ಕುl ಗೌರಿತಾ ಕೆ.ಜಿ. ಪ್ರಾರ್ಥಿಸಿದರೆ, ವಿಮಲಾ ರಂಗಯ್ಯ ಸ್ವಾಗತಿಸಿದರು, ಜೀವಿತ್ ವಂದಿಸಿದರು. ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಸಂಘಟನೆಯಲ್ಲಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಹಾಗೂ ನೌಕರ ವೃಂದ, ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಸುದ್ದಿ ಸುಳ್ಯ ಹಬ್ಬ ಸುಬ್ರಹ್ಮಣ್ಯ ಗ್ರಾಮ ಸಮಿತಿ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ, ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ, ಕುಕ್ಕೆಶ್ರೀ ಆಟೋ ಚಾಲಕ ಮಾಲಕರ ಸಂಘ, ಸುಬ್ರಹ್ಮಣ್ಯ ಬಿ.ಎಂ.ಎಸ್. ಆಟೋ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಟ್ಯಾಕ್ಸಿ ಮಾಲಕ ಚಾಲಕರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೋಲಿಸ್ ಠಾಣೆ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ, ಅನುಗ್ರಹ ಎಜುಕೇಶನ್ ಟ್ರಸ್ಟ್ ಸುಬ್ರಹ್ಮಣ್ಯ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಟ್ಯಾಕ್ಸಿ ಮತ್ತು ಗೂಡ್ಸ್ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ,
ಸ್ತ್ರೀ ಶಕ್ತಿ ಗುಂಪುಗಳು ಹಾಗೂ ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ, ನವೋದಯ ಸ್ವ-ಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ. ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ, ವರ್ತಕರ ಸಂಘ ಸುಬ್ರಹ್ಮಣ್ಯ, ಹೊಸಬೆಳಕು ಚಾರಿಟೇಬಲ್ ಟ್ರಸ್ಟ್ ಸುಬ್ರಹ್ಮಣ್ಯ ಇವರುಗಳು ಸಹಯೋಗ ನೀಡಿದ್ದರು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವೈದ್ಯಕೀಯ ತಂಡ ಈ ವೈದ್ಯಕೀಯ ಶಿಬಿರವನ್ನು ನಡೆಸಿಕೊಟ್ಟಿತು. ಮಧ್ಯಾಹ್ನ 2 ಗಂಟೆಗೆ ಶಿಬಿರ ಕೊನೆಗೊಳಿಸುವಾಗ ಒಟ್ಟು 447 ಮಂದಿ ವೈದ್ಯಕೀಯ ತಪಾಸಣೆ ನಡೆಸಿಕೊಂಡರು.
…..
ಪಕೃತಿಯಲ್ಲಿರುವ ಜೀವಿಗಳು ಅದರಷ್ಟಕ್ಕೆ ಜೀವಿಸುತ್ತವೆ. ಬದುಕುತ್ತವೆ. ಆದರೆ ಮನುಷ್ಯ ಮಾತ್ರ ಡಿಫರೆಂಟ್ . ಅವನು
ರಾಸಾಯನಿಕಯುಕ್ತ ಆಹಾರ ಸೇವಿಸುವುದರಿಂದ ರೋಗಗಳನ್ಬು ಸ್ವಯಂ ಗುಣಪಡಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಮನುಷ್ಯರು ದೈಹಿಕ ವ್ಯಾಯಾಮ ಮಾಡದೆ ಆರೋಗ್ಯ ಕಾಪಾಡದಿರುವ ಕಾರಣ ಹೃದಯಾಘಾತವಾಗುತ್ತಿದೆ. ವೈದ್ಯಕೀಯ ಸೇವೆ ಪಡೆಯುವಲ್ಲಿ ಮಾಹಿತಿಯ ಕೊರತೆಯೂ ಇದೆ. ವೈದ್ಯಕೀಯ ವೃತ್ತಿ ದಂಧೆಗೂ ಒಳಪಟ್ಟಿದೆ. ಆದ್ದರಿಂದ ಬಡವರ ಪಾಲಿಗೆ ಚಿಕಿತ್ಸೆ ಕಷ್ಟ ಎಂಬ ವಾತಾವರಣ ಇದೆ. ಅಂತಹ ಸಂದರ್ಭದಲ್ಲಿ ಜನರು ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು ಬಡಜನರಿಗೆ ಅನುಕೂಲಕರವಾಗಿದೆ. ಬರಿಗೈಯಲ್ಲಿ ಸುಬ್ರಹ್ಮಣ್ಯಕ್ಕೆ ಬಂದ ರವಿ ಕಕ್ಕೆಪದವು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅನೇಕ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಮಾಡುತ್ತಿರುವುದು ಮಾದರಿಯಾಗಿದೆ “
-ಡಾ.ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು
….
ಸುಬ್ರಹ್ಮಣ್ಯಕ್ಕೆ ಕಾರ್ಮಿಕನಾಗಿ ಬಂದು ಸ್ವಯಂ ವ್ಯಕ್ತಿತ್ವ ರೂಪಿಸಿಕೊಂಡು ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಸ್ವಚ್ಛತೆಯ ರೂವಾರಿಯಾಗಿ ಬೆಳೆದಿರುವ ರವಿ ಕಕ್ಕೆಪದವುರವರು ಸುಬ್ರಹ್ಮಣ್ಯದ ಕಣ್ಮಣಿಯಾಗಿದ್ದಾರೆ.
ಈಗ ಪತ್ರಿಕೋದ್ಯಮ ತಾಂತ್ರಿಕ ಆವಿಷ್ಕಾರಗಳ ಮೂಲಕ ಅತ್ಯಂತ ತಳ ಮಟ್ಟಕ್ಕೂ ಮುಟ್ಟಿದೆ. ಸಂವಿಧಾನದಲ್ಲಿ ಜನರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದಲ್ಲೇ ಮಾಧ್ಯಮ ರಂಗ ಕೆಲಸ ಮಾಡುತ್ತಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಪತ್ರಕರ್ತರಾಗಬಹುದಾಗಿದೆ. ಸುದ್ದಿ ಬಿಡುಗಡೆ ಪತ್ರಿಕೆ ಸ್ಥಾಪನೆಯಾಗಿ 40 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನಮ್ಮ ಗ್ರಾಮ ನಮ್ಮ ಹೆಮ್ಮೆ ಎಂಬ ಆಂದೋಲನವನ್ನು ಗ್ರಾಮಗ್ರಾಮಗಳಲ್ಲಿ ಆರಂಭಿಸಲಾಗಿದ್ದು, ತಾಲೂಕನ್ನು ಡಿಜಿಟಲ್ ತಾಲೂಕನ್ನಾಗಿ ಮಾಡುವ ಯೋಜನೆಗೂ ಚಾಲನೆ ಕೊಟ್ಟಿದ್ದೇವೆ. ತಾಲೂಕಿನ ಪ್ರತೀ ವ್ಯಾಪಾರಸ್ಥರೂ, ಉದ್ಯಮಿಗಳೂ ಕೇಂದ್ರ ಸರಕಾರದ ಒ.ಎನ್.ಡಿ.ಸಿ. ನೆಟ್ ವರ್ಕ್ ಗೆ ಸುದ್ದಿ ಡಿಜಿಟಲ್ ಸ್ಟೋರ್ ಎಂಬ ಆ್ಯಪ್ ಮೂಲಕ ನೋಂದಾವಣೆ ಮಾಡಿಕೊಂಡು ತಮ್ಮ ವ್ಯಾಪಾರ ವ್ಯವಹಾರವನ್ನು ವಿಸ್ತರಿಸಿ, ವೃದ್ಧಿಸಿಕೊಳ್ಳಬಹುದಾಗಿದೆ.
– ಹರೀಶ್ ಬಂಟ್ವಾಳ್
….
ರವಿ ಕಕ್ಕೆಪದವುರವರು ನನಗೆ ಮಂಗಳೂರಿಗೆ ಮೂರು ವಿಚಾರಗಳಿಗೆ ಸಂಬಂಧಿಸಿ ಫೋನ್ ಮಾಡುತ್ತಲೇ ಇರುತ್ತಾರೆ. ಬಡವರ ಚಿಕಿತ್ಸೆಗೆ, ರಕ್ತ ಪಡೆಯಲು ಮತ್ತು ಡಾಕ್ಟರ್ ಅಥವಾ ಅಂಬ್ಯುಲೆನ್ಸ್ ಸೇವೆಗಾಗಿ.
ರವಿಯವರ ಮಕ್ಕಳು ಕೂಡ ಒಳ್ಳೆಯ ಹಾದಿಯಲ್ಲಿ ಗೌರವಯುತವಾಗಿ ಹಾದಿಯಲ್ಲಿ ಮುಂದುವರಿಯುತ್ತಿರುವುದು ನಿಜವಾದ ಆಸ್ತಿ. ಯ
– ಪಿ.ಬಿ.ಹರೀಶ್ ರೈ
…..
.ಇಲ್ಲಿ ನಮ್ಮ ಕಾಲೇಜಿನ ಎಲ್ಲಾ ವಿಭಾಗದ ವೈದ್ಯರು ಲಭ್ಯರಿದ್ದಾರೆ. ಹೆಚ್ಚುವರಿ ಚಿಕಿತ್ಸೆ ಇದ್ದರೆ ಕಾರ್ಡ್ ಕೊಡುತ್ತೇವೆ. ಅದನ್ನು ಮೆಡಿಕಲ್ ಕಾಲೇಜಿನಲ್ಲಿ ಬಂದು ತೋರಿಸಿದರೆ ಮುಂದಿನ ಚಿಕಿತ್ಸೆಗೆ ಶೇ.50 ರಿಯಾಯಿತಿ ನೀಡಲಾಗುವುದು.
– ಡಾ.ರಂಗನಾಥ್ ಶಿಬಿರದ ಉಸ್ತುವಾರಿ ವೈದ್ಯರು
…..
ನಮ್ಮ ಹುಡುಗರೇ ಸೇರಿ ನನ್ನ ಹೆಸರಲ್ಲಿ ಟ್ರಸ್ಟ್ ರಚನೆ ಮಾಡಿದ್ದಾರೆ. ಪ್ರತಿ ಆದಿತ್ಯವಾರ ನಾವು ಸ್ವಚ್ಚ ಮಾಡುತ್ತೇವೆ. ಪ್ರತಿ ಊರಲ್ಲೂ ಇದು ನಡೆಯಬೇಕು. ಬಂಟ್ವಾಳ್ ಸರ್ ಸದಾ ಬೆನ್ನುತಟ್ಟಿದ್ದಾರೆ. ತುಂಬಾ ಬೇಸರ ಆದಾಗ ನಾನವರಿಗೆ ಪೋನ್ ಮಾಡ್ತೇನೆ. ಅವರ ಪ್ರೋತ್ಸಾಹಕ ಮಾತುಗಳು ನಮ್ಮನ್ನು ಬೆಳೆಸಿದೆ.
ದಿ.ವಿಠಲ್ ರಾವ್ ಅವರನ್ನು ಈಗ ನಾನು ನೆನಪಿಸಿಕೊಳ್ಳುತ್ತೇನೆ. ಅವರು ನನಗೆ ಪ್ರೋತ್ಸಾಹ ನೀಡುತ್ತಿದ್ದರು. ಹರೀಶ್ ರೈ ಯವರು ಪ್ರತಿ ಬಾರಿಯೂ ನನಗೆ ಪ್ರೋತ್ಸಾಹ ನೀಡಿ ಬೆಳೆಸುತ್ತಿದ್ದಾರೆ.
*-ಡಾ.ರವಿಕಕ್ಕೆಪದವು*










