ಅಖಿಲ ಭಾರತ ವೃತ್ತಿ ಪರೀಕ್ಷೆ: ಕೆ.ವಿ.ಜಿ ಐ.ಟಿ.ಐ.ಗೆ ಶೇ.90 ಫಲಿತಾಂಶ

0


ಜುಲೈ 2025ರಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಶೇ.90ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಉತ್ತಮ ಫಲಿತಾಂಶ ಬಂದಿರುತ್ತದೆ.

ಪ್ರಥಮ ವರ್ಷದ 62 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ.87 ಫಲಿತಾಂಶ ಬಂದಿರುತ್ತದೆ. ದ್ವಿತೀಯ ವರ್ಷದ 79 ವಿದ್ಯಾರ್ಥಿಗಳಲ್ಲಿ 73 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ.92.4 ಫಲಿತಾಂಶ ಬಂದಿರುತ್ತದೆ. ಒಟ್ಟು 141 ವಿದ್ಯಾರ್ಥಿಗಳಲ್ಲಿ 127 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ.90 ಫಲಿತಾಂಶ ಬಂದಿರುತ್ತದೆ.

ಈ ಶೈಕ್ಷಣಿಕ ಸಾಧನೆಗಾಗಿ ಎ.ಒ.ಎಲ್.ಇ (ರಿ) ಇದೆರ ಚೆಯರ್‌ಮೆನ್ ಡಾ| ರೇಣುಕಾ ಪ್ರಸಾದ್ ಕೆ.ವಿ, ಕಾರ್ಯದರ್ಶಿ ಡಾ| ಜ್ಯೋತಿ ಆರ್ ಪ್ರಸಾದ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಂಶುಪಾಲರು ಸಂಸ್ಥೆಯ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.