ಬಹುಕಾಲದ ಬೇಡಿಕೆ ಹಲವರ ಶ್ರಮ- ತಹಶೀಲ್ದಾರ್ ರಿಂದ ಸೂಕ್ತ ಕ್ರಮ
ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯ ನಾಲ್ಕೂರು ಗ್ರಾಮದ ಗುಂಡಡ್ಕ ಕಾಲನಿ ನಿವಾಸಿಗಳ ಬಹುಕಾಲದ ಬೇಡಿಕೆಯೊಂದು ನಿವಾರಣೆ ಆದಂತಾಗಿದೆ.
ಕಂದಾಯ ಇಲಾಖೆಯ ವತಿಯಿಂದ ೯೪ಸಿ ಯೋಜನೆಯಡಿಯಲ್ಲಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೆ.೧೦ ರಂದು ನಡೆಯಿತು.
ಗುಂಡಡ್ಕ ಕಾಲನಿ ನಿವಾಸಿಗಳು ಹಲವರು ತಮ್ಮ ಹಕ್ಕು ಪತ್ರವಿಲ್ಲದೆ ಬಹಳಷ್ಟು ತೊಂದರೆ ಅನುಭವಿಸಿದ್ದರು, ಒಂದು ಹಂತದಲ್ಲಿ ಮನೆ ನಿವೇಶನಕ್ಕೆ ಮೀಸಲಾದ ಜಾಗವನ್ನು ಸರ್ಕಾರಿ ಭೂಮಿಯಾಗಿ ಮಾಡಿಸಿ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ಲಭಿಸುವಂತೆ ಕ್ರಮ ಕೈಗೊಳ್ಳಲಾಯಿತು. ಎ.ಸಿ. ಕೋರ್ಟ್ ನಲ್ಲೂ ಇದ್ದ ದಾವೆಯೂ ಮುಗಿದು ಸುಳ್ಯ ತಹಶೀಲ್ದಾರ್ ಅವರ ಸುಫರ್ಧಿಗೆ ಪೈಲ್ ಗಳು ಬಂದಿದ್ದವು. ಸುಳ್ಯ ತಹಶೀಲ್ದಾರ್ ಸೂಕ್ತ ಕ್ರಮ ಕೈಗೊಂಡು ಕೊನೆಗೂ ಹಕ್ಕು ಪತ್ರ ಲಭಿಸುವಂತಾಯಿತು.
















ಶಾಸಕಿ ಭಾಗೀರಥಿ ಮುರುಳ್ಯ ಹಕ್ಕುಪತ್ರ ವಿತರಿಸಿ ವಿತರಿಸಿದರು. ತಹಶೀಲ್ದಾರ್ ಮಂಜುಳ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು .ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ, ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಗ್ರಾ.ಪಂ. ಸದಸ್ಯ ವಿಜಯಕುಮಾರ್ ಚಾರ್ಮಾತ, ಗ್ರಾ.ಪಂ. ಮಾಜಿ ಸದಸ್ಯ ರಾಕೇಶ್ ಮೆಟ್ಟಿನಡ್ಕ ಮತ್ತಿತರರು ಉಪಸ್ಥಿತರಿದ್ದರು.












