ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ವನಮಹೋತ್ಸವ

0

ಜೇಸಿಐ ಬೆಳ್ಳಾರೆಯ ಜೇಸಿ ಸಪ್ತಾಹ ‘ಸಪ್ತರ್ಷಿ 2025’ ಅಂಗವಾಗಿ ಸುಳ್ಯ ಉಪವಲಯ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ಜೇಸಿ ಪೂರ್ತಿ ಮೂಸಾ ಸ್ಮರಣಾರ್ಥ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ವಲಯ 15ರ ಗೊ ಗ್ರೀನ್ ವಲಯ ಸಂಯೋಜಕ ಗುರುಪ್ರಸಾದ್ ನಾಯಕ್ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದಾರು.ಬೆಳ್ಳಾರೆ ಘಟಕದ ಸ್ಥಾಪಕ ಕಾರ್ಯದರ್ಶಿ ಕೃಷ್ಣಪ್ಪ ಮೂಲ್ಯ ಪೂರ್ತಿ ಮೂಸಾ ಸoಸ್ಮರಣಾ ಮಾತುಗಳನ್ನಾಡಿದರು. ಸಾಮಾಜಿಕ ಅರಣ್ಯ ಇಲಾಖೆಯ ಸುಳ್ಯ ಉಪವಲಯದ ಡಿ ಆರ್ ಎಫ್ ವೀರಭದ್ರಯ್ಯ ಕರಣಿಮಠ, ಬೆಳ್ಳಾರೆ ಝಾಕಾರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಯು ಹೆಚ್ ಅಬೂಬಕ್ಕರ್, ಹಿದಾಯ ಪಬ್ಲಿಕ್ ಸ್ಕೂಲ್ ನ ಮುಖ್ಯ ಶಿಕ್ಷಕಿ ಸುನೈನಾ, ಬೆಳ್ಳಾರೆ ಜೇಸಿಐನ ನಿಕಟಪೂರ್ವಧ್ಯಕ್ಷ ಜಗದೀಶ್ ರೈ ಪೆರುವಾಜೆ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು. ಯಾಹಿಯಾ ಬೆಳ್ಳಾರೆ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು. ವರದಿ : ಉಮೇಶ್ ಮಣಿಕ್ಕಾರ