ಸಂಪಾಜೆ : ರತ್ನಶ್ರೀ ಸ್ವ -ಸಹಾಯ ಸಂಘದ 20 ನೇ ವಾರ್ಷಿಕೋತ್ಸವ

0


ಶ್ರೀ ಕ್ಷೇ. ಧ. ಗ್ರಾ. ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಸುಳ್ಳ್ಯ ತಾಲೂಕು ದ. ಕ. ಸಂಪಾಜೆ ಒಕ್ಕೂಟದ “ರತ್ನಶ್ರೀ ” ಸ್ವ -ಸಹಾಯ ಸಂಘದ ೨೦ನೇ ವಾರ್ಷಿಕೋತ್ಸವವು ಇತ್ತೀಚಿಗೆ ಸಂಘದ ಸದಸ್ಯೆ ಶ್ರೀಮತಿ ಕಾತ್ಯಾಯಿನಿ ಕರುಣಾಕರರವರ ಮನೆಯಲ್ಲಿ ನಡೆಯಿತು. ಅಧ್ಯಕ್ಷಥೆಯನ್ನು ಒಕ್ಕೂಟದ ಅಧ್ಯಕ್ಷರಾದ ಈಶ್ವರ ಆಚಾರ್ಯರವರು ವಹಿಸಿದ್ದರು. ಸಾಮೂಹಿಕ ಧ್ಯೇಯಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಯೋಜನಾಧಿಕಾರಿ ಮಾಧವರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.


ಸಭೆಯಲ್ಲಿ ವಲಯ ಮೇಲ್ವಿಚಾರಕಾರದ ಹರೀಶ್, ಸೇ. ಪ್ರತಿನಿಧಿ ಶ್ರೀಮತಿ ಜಯಲಕ್ಷ್ಮಿ ಒಕ್ಕೂಟದ ಉಪಾಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿ ಶ್ರೀಮತಿ ರಜನಿ, ಜೊತೆಕಾರ್ಯದರ್ಶಿ ಶ್ರೀಮತಿ ರಝಿಯಾ, ಕೋಶಾಧಿಕಾರಿ ಶ್ರೀಮತಿ ಲೀಲಾವತಿ ಮತ್ತು ಮನೆಯ ಯಜಮಾನರಾದ ಕರುಣಾಕರರವರು ಉಪಸ್ಥಿತರಿದ್ದರು.
೨೦ ವರ್ಷಗಳ ಸಾಧನಾವರದಿಯನ್ನು ಶ್ರೀಮತಿ ಯಶೋದಾ ಶ್ರೀಧರರವರು ವಾಚಿಸಿದರು. ನಂತರ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಎಸ್. ಎಸ್. ಎಲ್. ಸಿ. ಮತ್ತು ಪಿ. ಯು. ಸಿ. ಯಲ್ಲಿ ಅತ್ಯಾದಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಮಾನ್ಯ ಯೋಜನಾಧಿಕಾರಿ ಸಭೆಯಲ್ಲಿ ಮಾತನಾಡಿ, ಸಂಘವು ಇವತ್ತು ಅತ್ಯುತ್ತಮ ಕಾರ್ಯಕ್ರಮ ನಡೆಸಿರುತಾರೆ ಈ ಸಂಘವು “ತಾಲೂಕಿಗೆ ಮಾದರಿ ಸಂಘವಾಗಿದೆ.” ಎಂದು ಪ್ರಶಂಸಿದರು. ವಲಯ ಮೇಲ್ವಿಚಾರಕರು, ಸೇ. ಪ್ರತಿನಿಧಿ, ಒಕ್ಕೂಟದ ಪದಾಧಿಕಾರಿಗಳು, ಮಾತನಾಡಿ ಸಂಘಕ್ಕೆ ಶುಭಹಾರೈಸಿದರು. ಕೊನೆಗೆ ಅಧ್ಯಕ್ಷರು ತಮ್ಮ ನುಡಿಯಲ್ಲಿ “ಈ ಸಂಘವು ಒಕ್ಕೂಟದ ಇತರ ಸಂಘಗಳಿಗೆ ಮಾದರಿಯಾಗಲಿ ” ಎಂದು ಹಾರೈಸಿದರು. ಶ್ರೀಧರರವರು ಸಂಘದ ಬಗ್ಗೆ ತನ್ನ ಅನಿಸಿಕೆ ವ್ಯಕ್ತಪಡಿಸಿದರು. ಅತಿಥಿಗಳಿಗೆ ಸದಸ್ಯರೆಲ್ಲರೂ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀಮತಿ ಕೇಶವತಿ ಸ್ವಾಗತಿಸಿ, ಶ್ರೀಮತಿ ಲಕ್ಷ್ಮಿಯವರು ವಂದಿಸಿದರು. ಶ್ರೀಮತಿ ಸಾವಿತ್ರಿಯವರು ಕಾರ್ಯಕ್ರಮ ನಿರೂಪಿಸಿದರು.