ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ – ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಎಸ್. ಎಸ್. ಪಿ. ಯು. ಕಾಲೇಜು, ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ಸುಳ್ಯ ತಾಲೂಕು ಮಟ್ಟದ 14 ಹಾಗೂ 17 ರ ವಯೋಮಾನದ ಬಾಲಕ -ಬಾಲಕಿಯರ ಯೋಗಾಸನ ಸ್ಪರ್ಧೆಯನ್ನು ಸೆ.11ರಂದು ಎಸ್. ಎಸ್.ಪಿ. ಯು. ಕಾಲೇಜು ಬೆಳ್ಳಿಹಬ್ಬ ಸಭಾಭವನ ಸುಬ್ರಹ್ಮಣ್ಯ ದಲ್ಲಿ ಆಯೋಜಿಸಲಾಗಿತ್ತು.















17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಾಂಪ್ರದಾಯಕ ಯೋಗಾಸನ ವಿಭಾಗದಲ್ಲಿ ಮತ್ತು ಕಲಾತ್ಮಕ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿರುವ ದೀಕ್ಷಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈಕೆ ಸುಳ್ಯ ತಾಲೂಕಿನ ಸರಕಾರಿ ಪ್ರೌಢ ಶಾಲೆ ಎಲಿಮಲೆ ಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆ ನಿವಾಸಿ ಸಿದ್ದಲಿಂಗ ಮತ್ತು ಶ್ರೀಮತಿ ಕೋಮಲಾಂಗಿ ರವರ ಪುತ್ರಿ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾಳೆ.










