
ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆಯನ್ನು ( ಮೊಂತಿ ಫೆಸ್ತ್) ಅದ್ದೂರಿಯಾಗಿ ಆಚರಿಸಲಾಯಿತು.
















ಹೂಗಳಿಂದ ಶೃoಗರಿಸಿದ ಮೇರಿ ಮಾತೆಯ ಪ್ರತಿಮೆಯನ್ನು ಭಕ್ತಿ ಪೂರ್ವಕವಾಗಿ ಮೆರವಣಿಗೆಯಲ್ಲಿ ಜ್ಯೋತಿ ಸರ್ಕಲ್ ನಿಂದ ಸೈಂಟ್ ಬ್ರಿಜಿಡ್ಸ್ ಚರ್ಚ್ ಗೆ ತರಲಾಯಿತು. ಧರ್ಮಗುರುಗಳಾದ ರೆ.ಫಾ. ಆಲ್ವಿನ್ ಎಡ್ವರ್ಡ್ ಡಿಕುನ್ಹಾರವರು ಹೊಸ ತೆನೆಗಳನ್ನು ಆಶೀರ್ವದಿಸಿದರು. ನಂತರ ಬಾಲೆ ಮರಿಯಳ ಪ್ರತಿಮೆಗೆ ಮಕ್ಕಳು ಮತ್ತು ಹಿರಿಯರು ಹೂಗಳನ್ನು ಅರ್ಪಿಸಿದರು. ಬಳಿಕ ಸೈಂಟ್ ಬ್ರಿಜಿಡ್ಜ್ ಚರ್ಚ್ ನ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರಬಲಿ ಪೂಜೆ ಅರ್ಪಿಸಲಾಯಿತು. ಅತಿಥಿ ಗುರುಗಳಾಗಿ ಸುಳ್ಯದವರೇ ಆದ ವಂದನೀಯ ಫಾದರ್ ಓಸ್ವಲ್ಡ್ ಲಸ್ರಾದೋರವರು ಸಹಕರಿಸಿದರು.












