














ಐವರ್ನಾಡು ಗ್ರಾಮದ ದೇವರಕಾನದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ.
ತೀರ್ಥಪ್ರಸಾದ್ ಕುಳ್ಳಂಪಾಡಿ (30)ಎಂಬವರು ಮನೆಯ ಹಿಂಬದಿಯಲ್ಲಿ ಸೀರೆಯ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿರುವುದಾಗಿ ತಿಳಿದು ಬಂದಿದೆ.
ಇವರು ಕೆಲ ಸಮಯದ ಹಿಂದೆ ಬೆಳ್ಳಾರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಇತ್ತೀಚೆಗೆ ಜೆಸಿಬಿ ಚಾಲಕರಾಗಿ ದುಡಿಯುತ್ತಿದ್ದರೆನ್ನಲಾಗಿದೆ.










