ಪಾಜಪಳ್ಳ ಸೈಯ್ಯದ್ ಅಬೂಬಕ್ಕರ್ ಸಾಹೇಬ್ ನಿಧನ
ಪಾಜಪಳ್ಳ ಇಸಾಕ್ ಸಾಹೇಬ್ ರವರ ಅಣ್ಣ, ಬಾಳಿಲ ಗ್ರಾಮದ ಪಾಜಪಳ್ಳ ಹಾಜಿ ಸೈಯದ್ ಅಬೂಬಕ್ಕರ್ ಸಾಹೇಬ್ ( ಬಾಬುಲಾಲ್)ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.















ಅಬೂಬಕ್ಕರ್ ಸಾಹೇಬರು, ಇಸಾಕ್ ಸಾಹೇಬರು, ಅವರ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಒಟ್ಟಾಗಿ ಒಂದೇ ಮನೆಯಲ್ಲಿ ಕೂಡುಕುಟುಂಬವಾಗಿ ಜೀವಿಸುತ್ತಿದ್ದು, ಇತ್ತೀಚೆಗಿನ ದಿನಗಳಲ್ಲಿ ಇದು ಅಪರೂಪದ ವಿಚಾರವಾಗಿದೆ. ಅಬೂಬಕ್ಕರ್ ರವರು ಇತ್ತೀಚಿನ ವರೆಗೆ ಕನ್ನಡಕ ಇಲ್ಲದೆ ಕುರಾನ್, ನ್ಯೂಸ್ ಪೇಪರ್ ಇತ್ಯಾದಿಗಳನ್ನು ಓದುತ್ತಿದ್ದರು. ಮನೆಗೆ ಬಂದವರನ್ನು ಬಹಳ ಗೌರವದಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ಇವರಿಗೆ ಹಮೀದ್ ಸಾಹೇಬ್ ಮತ್ತು ರಜಾಕ್ ಸಾಹೇಬ್ ಇಬ್ಬರು ಗಂಡು ಮಕ್ಕಳು. ಸಹೋದರ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅವರು ಅಗಲಿದ್ದಾರೆ.










