ಮರ್ಕಂಜ: ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಬೆದ್ರುಪಣೆ ಸುಶ್ಮಿತಾ ಎಂ.ಎ ಇವರಿಗೆ ಸನ್ಮಾನ

0

ಗಡಿಭದ್ರತಾ ಪಡೆಗೆ ಆಯ್ಕೆಯಾದ ಬೆದ್ರುಪನೆ ಸುಶ್ಮಿತಾ ಎಂ.ಎ ಇವರಿಗೆ ಸೆ. 10ರಂದು ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಐಸಿರಿ ಸಭಾಂಗಣದಲ್ಲಿ ಸಹಕಾರಿ ಸಂಘ, ವಿವಿಧ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮವು ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪುರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಪರೀವೀಕ್ಷಾಣಾಧಿಕಾರಿ ಲಕ್ಷ್ಮೀಶ ರೈಗಳು ಸುಶ್ಮಿತಾ ಎಂ ಎ ಕುರಿತು ಅಭಿನಂದನಾ ಭಾಷಣ ಮಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತಾಲೂಕು ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಕಂಜಿಪಿಲಿ ನೆರವೇರಿಸಿ ಸನ್ಮಾನಿತಳ ಕುರಿತು ಅಭಿಮಾನದ ಮಾತುಗಳನ್ನಾಡಿ , ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಘಟನೆಗಳ ಮತ್ತು ನೇತೃತ್ವ ವಹಿಸಿದ ಸಹಕಾರಿ ಸಂಘದ ಕಾರ್ಯವನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಶ್ಮಿತಾ, ಗಡಿಭದ್ರತಾ ಪಡೆಗೆ ಆಯ್ಕೆಯಾಗುವಲ್ಲಿ ತಾನು ಪಟ್ಟ ಶ್ರಮ ಮತ್ತು ಅದರ ಹಿಂದಿನ ಕಷ್ಟಗಳನ್ನು ಭಾವನಾತ್ಮಕವಾಗಿ ಸಭೆಯಲ್ಲಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಾಗೂ ನಿವೃತ್ತ ನೌಕರರ ವೇದಿಕೆ ಮರ್ಕಂಜ ಘಟಕದ ಅಧ್ಯಕ್ಷ ಅಚ್ಯುತ ಪಿ ಸ್ವಾಗತಿಸಿ, ಸಭಾಧ್ಯಕ್ಷತೆ ವಹಿಸಿದ ದಯಾನಂದ ಪುರ ಅಧ್ಯಕ್ಷೀಯ ಮಾತೂಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ವಂದಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಂಘಟನೆಗಳ ಅಧ್ಯಕ್ಷರುಗಳು, ಪದಾಧೀಕಾರಿಗಳು, ತಾಲೂಕು ನಿವೃತ್ತ ನೌಕರರ ಸಂಘ ಸಂಧ್ಯಾ ರಶ್ಮಿಯ ಅಧ್ಯಕ್ಷ ರಂಗಯ್ಯರು ಇತರ ಪದಾಧಿಕಾರಿಗಳು ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೋಳಿಕೆ ಸೇರಿದಂತೆ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯಕುಮಾರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು, ಗ್ರಾಮಸ್ಥರು ಸೇರಿದ್ದರು.

ನಿತ್ಯಾನಂದ ಭೀಮಗುಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಕಾರ್ಯಕ್ರಮದ ಕೊನೆಯಲ್ಲಿ ಸಹಕಾರಿ ಸಂಘದ ವತಿಯಿಂದ ಮರ್ಕಂಜದ ಗೊಳಿಯಡ್ಕ, ಮಿತ್ತಡ್ಕ, ತೇರ್ಥಮಜಲು ಮತ್ತು ರೆಂಜಾಳ ಅಂಗನವಾಡಿ ಕೇಂದ್ರಗಳಿಗೆ ಗೊಡ್ರೇಜ್ ಗಳನ್ನು ವಿತರಿಸಲಾಯಿತು.