ಕೊಲ್ಲಮೊಗ್ರು ಹರಿಹರ ಪ್ರಾ. ಕೃ. ಪ. ಸ. ಸಂಘದ ವಾರ್ಷಿಕ ಮಹಾಸಭೆ

0

ವಾರ್ಷಿಕ 453 ಕೋಟಿ ವ್ಯವಹಾರ, 1.56 ಕೋಟಿ ಲಾಭಾಂಶ, ಶೇ.15.5 ಡಿವಿಡೆಂಡ್

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹರಿಹರ ಪಲ್ಲತ್ತಡ್ಕ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 13ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾ ಮಂದಿರದಲ್ಲಿ ಜರುಗಿತು.

ಸಭೆಯು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾl ಸೋಮಶೇಖರ ಕಟ್ಟೆಮನೆ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಣೇಶ್ ಭಟ್, ನಿರ್ದೇಶಕರುಗಳಾದ ಡ್ಯಾನಿ ಯಲದಾಳು, ರೇಗನ್ ಶೆಟ್ಟಿಯಡ್ಕ, ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು, ವೇದಾವತಿ ಮುಳ್ಳುಬಾಗಿಲು, ಮೆನಕಾ ಕೊಪ್ಪಡ್ಕ, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು, ಬೊಳಿಯ ಬೆಂಡೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೆಳ್ಯಪ್ಪ ಮಣಿಯಾನಮನೆ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ತೀರ್ಥಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘವು ಪ್ರಸಕ್ತ ಸಾಲಿನಲ್ಲಿ
ವಾರ್ಷಿಕ 453 ಕೋಟಿ ವ್ಯವಹಾರ ನಡೆಸಿ 1.56 ಕೋಟಿ ಲಾಭಾಂಶ ಪಡೆದಿದ್ದು ಶೇ.15 ಡಿವಿಡೆಂಡ್ ಹಂಚಿಕೆ ಮಾಡುವುದಾಗಿ ಘೋಷಿಸಲಾಯಿತು.
ಸಭೆಯಲ್ಲಿ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತೆ ಬೆಂಡೋಡಿ ಶಾಲೆಯ ಮುಖ್ಯ ಶಿಕ್ಷಕಿ ಲಲಿತಾ ಕುಮಾರಿ ಅವರನ್ನು ಸನ್ಮಾನಿಸಲಾಯಿತು. ಕ್ಯಾಂಪ್ಕೋ ವ್ಯವಹಾರ ಹೆಚ್ಚು ನಡೆಸಿದಕ್ಕಾಗಿ ಸುಧೀರ್ ಕೆ.ವಿ, ಪ್ರಮಾಣಿಕ ಗ್ರಾಹಕರಾಗಿರುವ ಸಾವಿತ್ರಿ ದೇವರಗದ್ದೆ, ಹರಿಹರ ಪಲ್ಲತಡ್ಕದಲ್ಲಿ ಹೆಚ್ಚು ವ್ಯಾಪರ ನಡೆಸಿದಕ್ಕಾಗಿ ಸತೀಶ್ ಮುಂಡಾಜೆ, ಕೊಲ್ಲಮೊಗ್ರು ಶಾಖೆಯಲ್ಲಿ ವ್ಯಾಪಾರ ನಡೆಸಿದಕ್ಕಾಗಿ ಧರ್ಮರಾಜ್ ಕೆ.ಪಿ ಅವರನ್ನು ಗೌರವಿಸಲಾಯಿತು.
ಸಂಘದ ಸದಸ್ಯರ ಸಾಧಕ ಮಕ್ಕಳು, ಪಿ. ಯು. ಸಿ ಯಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದವರು ಮಯೂರ ಜಿ ಮುಳ್ಳುಬಾಗಿಲು ,ಸ್ಥಿತ ಮಲ್ಲಾರ, ಹರೀಶ್ ಕಾನಾವು ಕಲ್ಮಕಾರು, ಹಾರ್ದಿಕ್ ಮುಂಡಾಜೆ
ಎಸ್. ಎಸ್. ಎಲ್. ಸಿ ಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದ ಶ್ರದ್ದಾ ದೊಡ್ಡಕಜೆ, ಲಕ್ಷ್ಮೀ ಅಂಬೆಕಲ್ಲು, ಸೃಜನ್ ಉಪ್ಪುಕಳ, .ಮೋಕ್ಷ ಬಟ್ಟೋಡಿ, ಸಂಗಮ್ ಕೊಪ್ಪಡ್ಕ, ಲಕ್ಷೀತಾ ಮುಳ್ಳುಬಾಗಿಲು, ವರುಣ್ ಅಂತಿಬೆಟ್ಟು , ವೀಕ್ಷಿತಾ ಮುಂಡಾಜೆ ಅವರುಗಳನ್ನು ಪುರಸ್ಕಾರ ಪತ್ರ, ನಗದು ನೀಡಿ ಗೌರವಿಸಲಾಯಿತು
ಕಾರ್ಯಕ್ರಮವನ್ನು ಸಂಘದ ಸಿಬ್ಬಂದಿ ದಿವ್ಯ ಮತ್ತು ಅಪೂರ್ವ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಅಧ್ಯಕ್ಷರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಗಣೇಶ್ ಭಟ್ ಇಡ್ಯಡ್ಕ ವಂದಿಸಿದರು.
ಗೌರೀಶ ಮಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

ಹರ್ಷಕುಮಾರ್ ದೇವಜನ,ನಿವೃತ್ತ ಶಿಕ್ಷಕ ಶಿವರಾಮ ಮಾಸ್ತರ್ ಕುಂಞಟಿ, ಕೆ.ಪಿ ಗಿರಿಧರ್, ಶ್ಯಾಮಸುಂದರ ಬೆಂಡೋಡಿ, ಹರ್ಷ ಮುಂಡಾಜೆ, ಪ್ರದೀಪ್ ಕುಮಾರ್ , ಗಧಾದರ ಮಲ್ಲಾರ, ಮಾಧವ ಚಾಂತಾಳ, ರಾಧಾಕೃಷ್ಣ ಬಿಲ್ಲಾರ ಮಜಲು, ರಾಮಚಂದ್ರ ಕಜ್ಜೋಡಿ, ಭವಾನಿಶಂಕರ ಪಿಂಡಿಮನೆ, ಶೇಖರ ಬಟ್ಟೋಡಿ, ಅನಂತರಾಮ ಮಣಿಯಾನಮನೆ, ಯತೀಶ್ ಕಜ್ಜೋಡಿ ಮತ್ತಿತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.