ವಿದ್ಯಾರ್ಥಿಗಳ ಪ್ರತಿಭಾ ಸಂಗಮ
ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷ ನ್ “ನೂರುಲ್ ಇಸ್ಲಾಂ ಮದ್ರಸ ಸಮಿತಿ ವತಿಯಿಂದ ಪ್ರವಾಧಿ ಮುಹಮ್ಮದ್ ಮುಸ್ತಫಾ (ಸ) ರವರ 1500ನೇ ಜನ್ಮದಿನಾಚರಣೆ ಯ ಪ್ರಯುಕ್ತ ಇಶ್ವೇ ರಸೂಲ್ ರಬೀಲ್ ಫೆಸ್ಟ್ ಹಾಗೂ ಮಾಸಿಕ ಸ್ವಲಾತ್ ಮಜ್ಲೀಸ್ ಸೆ 14 ರಂದು ಶಾಂತಿನಗರ ಮದ್ರಸಾ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಹಾಜಿ ಪಳ್ಳಿಕುಂಞಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದ್ಯಾಹ್ನ ಮದ್ರಸಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಪ್ರತಿಭಾ ಸಂಗಮ ಸದರ್ ಉಸ್ತಾದ್ ಅಬ್ದುಲ್ ಕರೀಂ ಸಖಾಫಿಯವರ ನೇತೃತ್ವದಲ್ಲಿ ನಡೆಯಿತು.















ಮಗ್ರಿಬ್ ನಮಾಝಿನ ಬಳಿಕ ಮೌಲಿದ್ ಮಜ್ಜಿಸ್
ಮತ್ತು ಉದ್ಯೋಧನಾ ಕಾರ್ಯಕ್ರಮವನ್ನು ಮೊಗರ್ಪಣೆ ಜುಮ್ಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಕಾಮಿಲ್ ಸಖಾಫಿ ಮುದುಗಡ ರವರು ನೆರವೇರಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈಚಾರ್ ಬದ್ರಿಯಾ ಜುಮಾ ಮಸೀದಿ ಖತಿಬರಾದ ಶಮೀರ್ ಅಹ್ಮದ್ ನಈಮಿ ನಿರ್ವಹಿಸಿ ಶುಭಾರೈಸಿದರು.
ವೇದಿಕೆಯಲ್ಲಿ ಸಹಾಯಕ ಖತೀಬರಾದ ಫಾಝಿಲ್ ಜೊಹರಿ,ಮೊಗರ್ಪಣೆ ಜಮಾಅತ್ ಕಮಿಟಿಯ ಉಪಾಧ್ಯಕ್ಷರಾದ ಸಿ ಎಂ ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಸದಸ್ಯರುಗಳಾದ ಎಸ್ ಸಂಶುದ್ದೀನ್, ಅಬ್ದುಲ್ ರಜ್ಜಾಕ್ ಜಿ ಕೆ,ಸಮಾಜ ಸೇವಕರುಗಳಾದ ಅಬ್ದುಲ್ ರಹಿಮಾನ್ ಸಂಕೇಶ್, ಅಬ್ದುಲ್ ಲತೀಫ್ ಹರ್ಲಡ್ಕ,ಉದ್ಯಮಿ ಲತೀಫ್ ಬಿ ಎಫ್, ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ, ಮೊಗರ್ಪಣೆ ಮದರಸ ಅಧ್ಯಾಪಕರುಗಳಾದ ಶಫೀಕ್ ಹಿಮಮಿ, ಯೂಸುಫ್ ನಿಝಾಮಿ, ನಾಸಿರ್ ಸಖಾಫಿ,ಹಂಝ ಸಖಾಫಿ,ಅಬೂಬಕ್ಕರ್ ಸಿದ್ದೀಕ್ ಸಅದಿ, ಮೂಸಾ ಮುಸ್ಲಿಯಾರ್,ಮೊದಲಾದವರು ಉಪಸ್ಥಿತರಿದ್ದರು.
ಕಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.

ಸ್ಥಳೀಯ ಸದರ್ ಮುಅಲ್ಲಿಮ್ ಅಬ್ದುಲ್ ರಶೀದ್ ಝೖನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಗೂ ಸದಸ್ಯರು ಸ್ಥಳೀಯ ಯುವಕರ ತಂಡದವರು ಸಹಕರಿಸಿದರು.










