ಎಡಮಂಗಲ ಪ್ರಾಥಮಿಕ ಕೃಷಿ ಪತ್ರಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

55.98‌ ಲಕ್ಷ ನಿವ್ವಳ ಲಾಭ, ಶೇ.7 ಡಿವಿಡೆಂಡ್ ಘೋಷಣೆ

ಎಡಮಂಗಲ ಪ್ರಾಥಮಿಕ ಕೃಷಿ ಪತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಮಾಲೆಂಗ್ರಿ ಯವರ ಅಧ್ಯಕ್ಷತೆ ಯಲ್ಲಿ ಸೆಪ್ಟೆಂಬರ್ 15ರಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪದ್ಮಯ್ಯ ನಾಯ್ಕ್ ಮುಳಿಯ,ನಿರ್ದೇಶಕರಾದ ಗಿರೀಶ್ ನಡುಬೈಲು, ಕಮಲಾಕ್ಷ ಹೊಳೆಕೆರೆ, ಅವಿನಾಶ್ ದೇವರಮಜಲು,ತ್ಯಾಗರಾಜ್ ಹೊಸಮನೆ, ಶ್ರೀಮತಿ ಸುಮಾ ನೂಚಿಲ, ರಾಘವ ಪೂಜಾರಿ ಜಾಲ್ತಾರ್, ಪುರಂದರ ರೈ ಬಲ್ಕಾಡಿ, ಕಾಂತು ದೇವಸ್ಯ, ಲಕ್ಷ್ಮೀನಾರಾಯಣ ಜಾಲ್ತಾರ್ ಉಪಸ್ಥಿತರಿದ್ದರು.


ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಧ್ಯಕ್ಷರು ಮಾತನಾಡಿ ಸದಸ್ಯರ ಪ್ರೋತ್ಸಾಹ ದಿಂದ ಸಂಘವು ಮಾದರಿಯಾಗಿ ಬೆಳೆದಿದೆ. ಇನ್ನು ಮುಂದೆಯೂ ಸದಸ್ಯರ ಸಹಕಾರ ಅಗತ್ಯವಿದೆ, ಕಳೆದ ಸಾಲಿನಲ್ಲಿ ಸಂಘವು 157,30,28,416.52 ವ್ಯವಹಾರ ಮಾಡಿ 55,98,021.98 ಲಾಭ ಗಳಿಸಿದೆ. ಸದಸ್ಯರಿಗೆ 7% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಡಮಂಗಲ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದು ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿಧಿ ವಿತರಿಸಲಾಯಿತು. ಸಂಘದ ಅಭಿವೃದ್ಧಿ ಮತ್ತು ಚಟುವಟಿಕೆಗಳ ಬಗ್ಗೆ ಕಲ್ಲೆಂಬಿ ವಿಶ್ವನಾಥ ಗೌಡ, ಈಶ್ವರ ಗೌಡ ಜಾಲ್ತಾರು, ರಾಮಣ್ಣ ಜಾಲ್ತಾರು, ಅನಂತೇಶ್ವರ ಭಟ್ ಚರ್ಚೆಯಲ್ಲಿ ಭಾಗವಹಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ದೋಳ್ತಿಲ ವರದಿ ವಾಚಿಸಿ ಸಭೆ ನಡೆಸಿದರು, ಸಿಬ್ಬಂದಿ ಗಳಾದ ನವೀನ್ ಕುಮಾರ್ ಕೆ ಆರ್, ಕುಂಞಣ್ಣ ಆಲಾಜೆ, ಅಶ್ವಥ್ ಜೆ, ಸರ್ವೇಶ್ ಎ, ಸಹಕರಿಸಿದರು, ವಿಜಯ ರಾಮಣ್ಣ ಪ್ರಾರ್ಥಿಸಿದರು,


ನಿರ್ದೇಶಕರಾದ ಗಿರೀಶ್ ನಡುಬೈಲು ಸ್ವಾಗತಿಸಿದರು, ನಿರ್ದೇಶಕರಾದ ಅವಿನಾಶ್ ದೇವರ ಮಜಲು ವಂದಿಸಿದರು.

(ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)