ದಸರಾ ಕ್ರೀಡಾ ಕೂಟದ ಯೋಗಾಸನ ಸ್ಪರ್ಧೆಯಲ್ಲಿ ವಿಧಾತ್ ಗೌಡ ಮುಡೂರು ರಾಜ್ಯ ಮಟ್ಟಕ್ಕೆ ಆಯ್ಕೆ

0

ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಸ೦ಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ೨೦೨೫-೨೬. ಯೋಗಾಸನ ಸ್ಪರ್ಧೆ ಯನ್ನು ೧೫ ಸೆಪ್ಟೆಂಬರ್ ೨೦೨೫ ರಂದು ಕ್ರೀಡಾ ಶಾಲಾ ಮೈದಾನ ಕೂಡಿಗೆನಲ್ಲಿ ಆಯೋಜಿಸಲಾಗಿತ್ತು. ಸಾಂಪ್ರದಾಯಕ ಯೋಗಾಸನ ವಿಭಾಗದಲ್ಲಿ ವಿಧಾತ್ ಗೌಡ. ಎಂ. ಟಿ. ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಅಯ್ಕೆ ಆಗಿದ್ದಾರೆ. ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ ಜಾಲ್ಸೂರು ನಲ್ಲಿ ೪ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಜ್ಜಾವರ ಗ್ರಾಮದ ಶ್ರೀಯುತ ತೀರ್ಥರಾಮ ಮುಡೂರು ಮತ್ತು ಪೂರ್ಣಿಮಾ. ಎ. ಜೆ. ರವರ ಪುತ್ರ. ನಿರಂತರ ಯೋಗ ಕೇಂದ್ರ ಸುಳ್ಯದಲ್ಲಿ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.