ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ
ತಂಡದ ಮೂರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪಿ.ಯು ಕಾಲೇಜ್ ನಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಪದೆದುಕೊಂಡಿದೆ. ಸರ್ವಾಂಗೀಣವಾಗಿ ಆಟವನ್ನು ಆಡಿದ ಅರಂತೋಡು ಕಾಲೇಜು ತಂಡದ ನಾಯಕಿ ಚಿಂತನಾ ಪಿ., ಕೆ.ಆರ್. ಸುಮಾ ಹಾಗೂ ಕೃತಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.















ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುರೇಶ್ ವಾಗ್ಲೆಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶಾಂತಿ ಎ.ಕೆ., ದೈಹಿಕ ಶಿಕ್ಷಕ ಜಯರಾಮ ತಂಡದ ವ್ಯವಸ್ಥಾಪಕ ಉಪನ್ಯಾಸಕರಾದ ಪದ್ಮಕುಮಾರ್ ತರಬೇತಿ ನೀಡಿದ್ದರು.










