ಕಲ್ಲುಗುಂಡಿ :ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ನಮೋ ಬ್ರಿಗೇಡ್ ವತಿಯಿಂದ ವಿಶೇಷ ಪೂಜೆ

0

ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಕಲ್ಲುಗುಂಡಿಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿನಮೋ ಬ್ರಿಗೇಡ್ ವತಿಯಿಂದ ದೀಪಾರಾಧನೆ ಮೂಲಕ ವಿಶೇಷ ಪೂಜೆ ಮಾಡಲಾಯಿತು.

ಮೋದಿಜಿಯವರ ಆರೋಗ್ಯ, ಆಯಸ್ಸು ವೃದ್ಧಿಯಾಗಿ ದೇಶ ಮತ್ತಷ್ಟು ಸದೃಢವಾಗಲಿ ಎಂದು ಪ್ರಾರ್ಥಿಸಲಾಯಿತು. ನಂತರ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ನ ವಿಜಯ್ ನಿಡಿಂಜಿ,
ನಿತಿನ್ ಬಿ. ಟಿ, ದೀಪಕ್ ರೈ ಕೈಪಡ್ಕ , ರಾಮಕೃಷ್ಣ ಕುಕ್ಕಂದೂರು, ಶ್ರೀಮತಿ ರಜನಿ ಶರತ್, ಶಿವರಾಮ ಬಾಲಂಬಿ,ದೈವಸ್ಥಾನದ ಪೂಜಾರಿ ನಾರಾಯಣ ಬಾಲಂಬಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.