ಉಮೇಶ್ ಗೌಡ ಆರ್ತಾಜೆಯವರಿಗೆ ಶ್ರದ್ಧಾಂಜಲಿ , ವೈಕುಂಠ ಸಮಾರಾಧನೆ

0

ಕೃಷಿಕರಾಗಿದ್ದ ಸುಳ್ಯ ಪೈಚಾರು ನಿವಾಸಿ ಉಮೇಶ್ ಗೌಡ ಆರ್ತಾಜೆ
ಸೆ. 2 ರಂದು ನಿಧನರಾಗಿದ್ದು ಅವರ ಶ್ರದ್ದಾಂಜಲಿ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮವು ಸೆ.18ರಂದು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.

ಕಮಲಾಕ್ಷ ನಂಗಾರು ಅವರು ನುಡಿ ನಮನ ಸಲ್ಲಿಸಿ, ಉಮೇಶ್ ಗೌಡರು ಜೀವನದಲ್ಲಿ ಸಾಗಿ ಬಂದ ಕಷ್ಟ ಸುಖ, ಆದರ್ಶಗಳ ಬಗ್ಗೆ ಗುಣಗಾನಗೈದರು.

ಆಗಮಿಸಿದ ನೂರಾರು ಜನರು ದಿ. ಉಮೇಶ್ ಗೌಡ ಆರ್ತಾಜೆಯವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪತ್ನಿ ವೇದಾವತಿ, ಪುತ್ರಿ ಸುದ್ದಿ ಚಾನೆಲ್ ನಿರೂಪಕಿ ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ, ಅಳಿಯ ವಿತೇಶ್ ಕೋಡಿ, ಮೊಮ್ಮಗ ನಿನಾದ್ ಮೂರ್ತಿ ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರು ಉಪಸ್ಥಿತರಿದ್ದರು .