














ಸುಳ್ಯದ ಕುರುಂಜಿಬಾಗ್ ನಿಲ್ದಾಣದಿಂದ ಪ್ರಯಾಣಿಸುವಾಗ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಬ್ರೇಸ್ ಲೈಟ್ ಆಟೋ ರಿಕ್ಷಾ ದಲ್ಲಿ ಕಳೆದು ಕೊಂಡಿದ್ದು, ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ಬಿಎಂಎಸ್ ಸಂಯೋಜಿತ ಆಟೋ ಚಾಲಕರ ಸಂಘದ ಸದಸ್ಯನಾದ ಭರತ್ ಮುಳ್ಯ ಅವರನ್ನು ಬಿ ಎಂ ಎಸ್ ಸಂಯೋಜಿತ ನಿಲ್ದಾಣದ ನಿರ್ದೇಶಕರಾದ ವೇಣುಗೋಪಾಲ ಹಾಗೂ ಶಂಕರಪ್ಪ ಅವರ ನೇತೃತ್ವದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ. ಎಸ್ ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್. ಎಂ ಶಾಂತಿನಗರ, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ನಿಲ್ದಾಣದ ಪ್ರಮುಖರಾದ ನಿತ್ಯಾನಂದ ವಸಂತ, ಹಾಗೂ ಇತರ ಸದಸ್ಯರಾದ ರಾಧಾಕೃಷ್ಣ ಜಯಪ್ರಕಾಶ್, ರಮೇಶ್ ಜಯಂತ, ಸೀತಾರಾಮ ಉಪಸ್ಥಿತರಿದ್ದರು.










