ಅ.01 : ಕೊಡಿಯಾಲದಲ್ಲಿ 25 ನೇ ವರ್ಷದ ಶ್ರೀ ಶಾರದೋತ್ಸವ

0

ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಸಂಜೆ “ಬನತ ಬಂಗಾರ್” ಯಕ್ಷಗಾನ ಬಯಲಾಟ

ಕೊಡಿಯಾಲ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 25 ನೇ ವರ್ಷದ ಶ್ರೀ ಶಾರದೋತ್ಸವವು ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.01 ರಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 9.00 ಕ್ಕೆ ಶ್ರೀ ಶಾರದಾ ದೇವಿ ಪ್ರತಿಷ್ಠಾಪನೆ,ನಂತರ ಸಾಮೂಹಿಕ ಆಯುಧ ಪೂಜೆ ಪ್ರಾರಂಭ,ಬೆಳಿಗ್ಗೆ ಗಂಟೆ 10.00ರಿಂದ 11.30 ರ ತನಕ ಶ್ರೀ ಅಯ್ಯಪ್ಪ ಸ್ವಾಮಿ ಮಕ್ಕಳ ಕುಣಿತ ಭಜನಾ ತಂಡ ಕಲ್ಪಣೆ,ಶ್ರೀ ಧರ್ಮಶ್ರೀ ಮಕ್ಕಳ ಕುಣಿತ ಭಜನಾ ತಂಡ ಕಲ್ಪಡ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ಗಂಟೆ 11.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 1.00 ಕ್ಕೆ ಮಹಾಪೂಜೆ,ಅಕ್ಷರಾಭ್ಯಾಸ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಗಂಟೆ 2.00 ರಿಂದ 4.00 ರತನಕ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಸಂಜೆ ಗಂಟೆ 4.00 ರಿಂದ ಕಲ್ಲಗದ್ದೆ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 6.00 ರಿಂದ 10.00 ರ ತನಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಬನತ ಬಂಗಾರ್” ಯಕ್ಷಗಾನ ನಡೆಯಲಿದೆ.
ರಾತ್ರಿ ಗಂಟೆ 10.00 ಕ್ಕೆ ಮಹಾಪೂಜೆ,ಶ್ರೀ ದೇವಿಯ ಶೋಭಾಯಾತ್ರೆ ನಡೆಯಲಿದೆ.
ಸಭಾಕಾರ್ಯಕ್ರಮ,ಸಾಧಕರಿಗೆ ಸನ್ಮಾನ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ

ಬೆಳಿಗ್ಗೆ ಗಂಟೆ 11.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಶಾರದೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಆರ್ವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪುತ್ತಿಲ ಪರಿವಾರ ಟ್ರಸ್ಟ್ ನ ಅರುಣ್ ಕುಮಾರ್ ಪುತ್ತಿಲ ,ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ ಕುರಿಯಾಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಹಲವು ಜನ ಗಣ್ಯರು ಗೌರವ ಉಪಸ್ಥಿತರಿರಲಿದ್ದಾರೆ.
ಶಾರದೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ವೆಂಕಟೇಶ ಪೈ ಬಾಚೋಡಿ,ನಿವೃತ್ತ ಯೋಧರುಗಳಾದ ರವೀಂದ್ರ ಗೌಡ ರಾಮಕುಮೇರಿ,ಸಂಜೀವ ಗೌಡ ರಾಮಕುಮೇರಿ,ನಾಗೇಶ್ ಆರ್ವಾರ,ಕೊರಗಪ್ಪ ಗೌಡ ಕಲ್ಪಡರವರನ್ನು ಸನ್ಮಾನಿಸಲಾಗುವುದು.
ಎಸ್.ಎಸ್.ಎಲ್.ಸಿ,ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ,ಅಶಕ್ತ ಕುಟುಂಬಗಳಿಗೆ ಧನಸಹಾಯ ನೀಡಲಾಗುವುದು ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಆರ್ವಾರ ಮತ್ತು ಕಾರ್ಯದರ್ಶಿ ಶೀತಲ್ ರೈ ಕುರಿಯಾಜೆ ತಿಳಿಸಿದ್ದಾರೆ.