ಅ.01,02 : ದರ್ಖಾಸ್ತುವಿನಲ್ಲಿ 20 ನೇ ವರ್ಷದ ಶ್ರೀ ಶಾರದೋತ್ಸವ

0

ಬೆಳ್ಳಾರೆ ಗ್ರಾಮದ ಶ್ರೀ ಶಾರದಾಂಬಾ ಸೇವಾ ಸಮಿತಿ ದರ್ಖಾಸ್ತು ವತಿಯಿಂದ 20 ನೇ ವರ್ಷದ ಶ್ರೀ ಶಾರದೋತ್ಸವವು ಅ.01 ಮತ್ತು 02 ರಂದು ದರ್ಖಾಸ್ತು ವಠಾರದಲ್ಲಿ ನಡೆಯಲಿದೆ.


ಬೆಳಿಗ್ಗೆ ಗಂಟೆ 8.30 ಕ್ಕೆ ಶ್ರೀ ಶಾರದಾಂಬಾ ವಿಗ್ರಹ ಪ್ರತಿಷ್ಠಾಪನೆ,ಗಣಪತಿ ಹೋಮ,ಗಂಟೆ 10.00 ಕ್ಕೆ ಭಜನಾ ಕಾರ್ಯಕ್ರಮ,ಶ್ರೀ ಶಾರದಾಂಬಾ ಮಹಿಳಾ ಮಂಡಳಿ ಇವರಿಂದ,ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್.ರೈ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.


ಬಳಿಕ ಅನ್ನಸಂತರ್ಪಣೆ ನಡೆಯಲಿದೆ.


ಅಪರಾಹ್ನ ಗಂಟೆ 1.30 ಕ್ಕೆ ವಾಹನ ಪೂಜೆ,ಗಂಟೆ 2.00 ರಿಂದ ಶಾಲಾ ಮಕ್ಕಳಿಂದ ಮತ್ತು ಸಾರ್ವಜನಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ ಉದ್ಘಾಟಿಸಲಿದ್ದಾರೆ.
ಸಂಜೆ ಗಂಟೆ 6.00 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ವಸಂತ ಆಚಾರ್ಯ ಇವರ ಸಾರಥ್ಯದ ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಡಾನ್ಸ್ ಧಮಾಕ ನಡೆಯಲಿದೆ.
ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ದೀಕ್ಷಿತ್ ಗೌಡ ಕುಂತೂರು ಹಾಗೂ ಝೀ ಕನ್ನಡ ಮಹಾನಟಿ ಖ್ಯಾತಿಯ ಸಾಯಿಶ್ರುತಿ ಪಿಲಿಕಜೆ ಇವರಿಂದ ಮಿಮಿಕ್ರಿ ಮತ್ತು ಧ್ವನಿ ಗರೋಡಿ ನಡೆಯಲಿದೆ.
ಅ.,02 ರಂದು ಬೆಳಿಗ್ಗೆ ಗಂಟೆ 9.00 ಕ್ಕೆ ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ಕ್ರೀಡಾ ಸ್ಪರ್ಧೆ ನಡೆಯಲಿದೆ.
ಲಯನ್ಸ್ ವಲಯ ಅಧ್ಯಕ್ಷ ಚಂದ್ರಶೇಖರ ನಂಜೆ ಉದ್ಘಾಟಿಸಲಿರುವರು.
ಸಂಜೆ ಗಂಟೆ ,4.00 ಕ್ಕೆ ಶ್ರೀ ಜಲದುರ್ಗಾದೇವಿ ಮಕ್ಕಳ ಕುಣಿತ ಭಜನಾ ತಂಡ ಪೆರುವಾಜೆ ಇವರಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ ಗಂಟೆ 5.00 ರಿಂದ ಶ್ರೀ ಶಾರದಾ ದೇವಿಯ ವಿಜ್ರಂಭಣೆಯ ಶೋಭಾಯಾತ್ರೆ ನಡೆದು ವಿಸರ್ಜನೆ ನಡೆಯಲಿದೆ.
ಗಂಗಾಧರ ರೈ ಪುಡ್ಕಜೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.