ದೊಡ್ಡತೋಟ ಶಾಲೆಗೆ ಫ್ಯಾನ್ ಹಾಗೂ ಚಯರ್ ಕೊಡುಗೆ

0

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೊಡ್ಡ ತೋಟ ಇಲ್ಲಿಗೆ ಈ ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಕೃಷ್ಣ ಎ . ಅಂಬಟಡ್ಕ ಮನೆ ದೊಡ್ಡ ತೋಟ ಇವರು ಕೊಡುಗೆಯಾಗಿ ಶಾಲೆಗೆ 50 ಕುರ್ಚಿಗಳು ಹಾಗೂ ಒಂದು ಫ್ಯಾನ್ ಕೊಡುಗೆಯಾಗಿ ನೀಡಿದ್ದಾರೆ.


ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಚಾಕಲೇಟ್ ನೀಡಿರುತ್ತಾರೆ.
ಇವರಿಗೆ ಶಾಲಾ ಪರವಾಗಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾಗಿರುವ ಜನಾರ್ದನ .ಕೆ .ಕುಂಟಿಕಾನ ಇವರನ್ನು ಸನ್ಮಾನಿಸಲಾಯಿತು. ಇವರು ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಯವರು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿ ಬಳಗ, ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.