ಸೆ‌.22 ರಿಂದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವ

0

ಸೆ.26 ರಂದು ಸಾಮೂಹಿಕ ಚಂಡಿಕಾ ಹವನ, ಅ‌.2 ಕದಿರು ಪೂಜೆ, ಶಮಿ ಪೂಜೆ, ನವಾನ್ನ ಬೋಜನ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತದಲ್ಲಿ ಸೆ.22 ರಿಂದ ಅ.2 ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ.

ನವರಾತ್ರಿ ಸಂದರ್ಭ ಪ್ರತಿದಿನ ಮಹಾಪೂಜೆ, ವಾಹನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸೆ.22 ರಂದು ಬೆಳಗ್ಗೆ ಗಣಹೋಮ ನಡೆಯಲಿದೆ. ಸೆ.26 ರಂದು ಸಾಮೂಹಿಕ ಚಂಡಿಕಾ ಹವನ ಮತ್ತು ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದ್ದು, ಸೆ.29 ರಂದು ವಿದ್ಯಾರಂಭ ಕಾರ್ಯಕ್ರಮ ಆರಂಭ. ಅ.1 ರಂದು ರಾತ್ರಿ ವಿಶೇಷ ರಂಗಪೂಜೆ ನಡೆಯಲಿದೆ. ಅ‌.2 ರಂದು ಕದಿರು ಪೂಜೆ, ಶಮಿ ಪೂಜೆ ನಡೆಯಲಿದೆ. ಅಲ್ಲದೇ ಇದೇ ದಿವಸ ನವಾನ್ನ ಬೋಜನ ನಡೆಯಲಿದೆ.
ಪ್ರತಿದಿನ ಸಂಜೆ 6.00 ಗಂಟೆಗೆ ಶ್ರೀದುರ್ಗಾ ಭಜನಾ ಮಂಡಳಿ ಮರಕತ, ಶ್ರೀದುರ್ಗಾ ಮಹಿಳಾ ಭಜನಾ ಮಂಡಳಿ ಮರಕತ ಹಾಗೂ ವಿವಿಧ ಭಜನಾ ಮಂಡಳಿಗಳ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಭಿಮಾನಿಗಳು ಭಾಗವಹಿಸುವಂತೆ ಆಡಳಿತ ಮಂಡಳಿ ವಿನಂತಿಸಿದೆ.