ಪೌರಸೇವಾ ನೌಕರರ ಸೇವಾ ಸಂಘದ ದ.ಕ. ಜಿಲ್ಲಾ ಅಧ್ಯಕ್ಷರಾಗಿ ಕೆ.ತಿಮ್ಮಪ್ಪ ಪಾಟಾಳಿ

0

ಪೌರಸೇವಾ ನೌಕರರ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ, ಸುಳ್ಯ ಪಟ್ಟಣ ಪಂಚಾಯತ್ ನ ಕರ ವಸೂಲಿಗಾರ ಕೆ.ತಿಮ್ಮಪ್ಪ ಪಾಟಾಳಿಯವರನ್ನು ನೇಮಕಗೊಳಿಸಲಾಗಿದೆ.

ಸಂಘದ ರಾಜ್ಯಾದ್ಯಕ್ಷ ಎನ್. ಪ್ರಸಾದ್ ರವರು ನೇಮಕಗೊಳಿಸಿದ್ದಾರೆ.

ತಿಮ್ಮಪ್ಪರವರು ಮೂಲತಃ ಪುತ್ತೂರಿನವರಾಗಿದ್ದು, ಸುಳ್ಯದ ಪಟ್ಟಣ ಪಂಚಾಯಿತಿನಲ್ಲಿ ಕಳೆದ 21 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.