ಸೆ. 22-ಅ.2: ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

0

ಬಳ್ಪ ಗ್ರಾ.ಪಂ. ವ್ಯಾಪ್ತಿಯ ಕೇನ್ಯ ಗ್ರಾಮದ ಕೇನ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವಗಳು ಸೆ. 22ರಿಂದ ಅ. 2ರ ತನಕ ವಿವಿಧ ವೈದಿಕ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಪ್ರತೀ ದಿನ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸೆ. 23ರಂದು ರಾತ್ರಿ 8.30ಕ್ಕೆ ಸಾಮೂಹಿಕ ದುರ್ಗಾಪೂಜೆ, ಸೆ. 24ರಂದು ಮಹಾವಿಷ್ಣು ದೇವರಿಗೆ ಹಾಲುಪಾಯಸ,
ಸೆ. 25ರಂದು ಬೆಳಿಗ್ಗೆ ತೆನೆ ತುಂಬಿಸುವುದು, ಗಣಪತಿ ದೇವರಿಗೆ ಅಪ್ಪಕಜ್ಜಾಯ ಸೇವೆ ನಡೆಯಲಿದೆ. ಸೆ. 26ರಂದು ರಾತ್ರಿ ಸಾಮೂಹಿಕ ರಂಗಪೂಜೆ, ಸೆ. 27ರಂದು ಬೆಳಿಗ್ಗೆ 8ರಿಂದ ನಾಗ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ನಾಗತಂಬಿಲ ನಡೆಯಲಿದೆ. ಸೆ. 30ರಂದು ಬೆಳಿಗ್ಗೆ 7 ಗಂಟೆಯಿಂದ ಚಂಡಿಕಾ ಹೋಮ ಮತ್ತು ಮೃತ್ಯುಂಜಯ ಹೋಮ, ಅ. 1ರಂದು ಮಧ್ಯಾಹ್ನ ಆಯುಧಪೂಜೆ, ರಾತ್ರಿ ರಂಗಪೂಜೆ, ಅ. 2ರಂದು ಆಂಜನೇಯ ಸ್ವಾಮಿಗೆ ಅಲಂಕಾರ ಪೂಜೆ ನಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಮೊಕ್ತೇಸರರಾದ ಗಿರಿನಾಥ ಶೆಟ್ಟಿ ಕೇನ್ಯಗುತ್ತು ತಿಳಿಸಿದ್ದಾರೆ.