ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಂ. ಬಿ. ಸೀತಾರಾಮ ಗೌಡರ ಅದ್ಯಕ್ಷತೆಯಲ್ಲಿ ಸೆ. ೧೯ ರಂದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

೨೦೨೪ ೨೫ ನೇ ಸಾಲಿನಲ್ಲಿ ವಾರ್ಷಿಕವಾಗಿ ೮ ಕೋಟಿ, ೧೫ ಲಕ್ಷದ, ೮೪ ಸಾವಿರದ, ೪೪೭ ರೂ. ೬೮ ಪೈಸೆ ವ್ಯವಹಾರ ಮಾಡಿ, ೭ ಲಕ್ಷ ೮೭, ೬೭೯.೪೫ ಪೈ. ನಿವ್ವಳ ಲಾಭಗಳಿಸಿದೆ ಹಾಗೂ ಸದಸ್ಯರಿಗೆ ಶೇ. ೨೦ ಡಿವಿಡೆಂಟ್ ನೀಡಲಾಗುವುದು. ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಟಿ. ಸೀತಾರಾಮ ಗೌಡರು ಹೇಳಿದರು.
















ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಪಿ. ಆರ್., ನಿರ್ದೇಶಕರಾದ ಅಶೋಕ್ ಕುಮಾರ್ ರೈ, ಹರೀಶ್ ರೈ, ಸುಂದರ ಗೌಡ ಜಗನಾಥ ರೈ ಕೆ., ಶ್ರೀಮತಿ ಗೀತಾ, ಶ್ರೀಮತಿ ಭವ್ಯ, ಶ್ರೀಮತಿ ಸಾವಿತ್ರಿ, ಶ್ರೀಮತಿ ಸುಂದರಿ, ರಾಮಚಂದ್ರ ಎನ್., ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್, ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಜಿ. ಲೋಕನಾಥ ರೈ ಪಟ್ಟೆ, ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷ ವಸಂತ ನಡುಬೈಲು ವೇದಿಕೆಯಲ್ಲಿದ್ದರು. ಹಿರಿಯ ನಿರ್ದೇಶಕ ಸುಂದರ ಗೌಡ ಆರೆಂಬಿ ದೀಪ ಪ್ರಜ್ವಲ್ ಮಾಡಿ ಶುಭಹಾರೈಸಿದರು.
ನಿವೃತ ಪ್ರಿನ್ಸಿಪಾಲ್ ಊರಿನ ಹಿರಿಯರಾದ ಕಳತ್ತಾಜೆ ಜಯರಾಜ ಆಚಾರ್ಯ ದಂಪತಿಗಳನ್ನು ಮತ್ತು ಹಾಲು ಸೊಸೈಟಿ ಸ್ಥಾಪಿಸಿದ ಸಂದರ್ಭದಲ್ಲಿ ಗಣನಿಯ ಪಾತ್ರ ಹಾಗೂ ಹಿರಿಯ ಹಾಲು ಪೂರೈಕೆ ಮಾಡುವ ಹಾಗೂ ನಿರಂತರವಾಗಿ ಹಾಲು ಪೂರೈಕೆ ಮಾಡುತ್ತಿರುವ ಹಿರಿಯರಾದ ಬೊಳ್ಕಜೆ ಕುಂಞಣ್ಣ ಗೌಡರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸನ್ಮಾನ ಮಾಡಲಾಯಿತು.

ಸಂಘದ ನಿರ್ದೇಶಕ ಪ್ರಭಾಕರ ರೈ ಮರುವಂಜ ಇತ್ತೀಚೆಗೆ ನಿಧನ ಹೊಂದಿದ್ದು ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ನಿರಂತರ ಹಲವು ವರ್ಷಗಳಿಂದ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದು, ಪ್ರಥಮ, ದ್ವಿತೀಯ ಬಹುಮಾನ ಪಡೆದ ಮುಕ್ಕೂರು ಜಗನಾಥ ಪೂಜಾರಿ ಅನಘ ತಮಾನಿಮಾರ್, ಉದಯ ಕುಮಾರ್ ರೈ ಕುಕ್ಕುಮಜಲು, ಅಂಬೋಜಿಕೆರೆ ಶೂರಪ್ಪ ಗೌಡರನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಪ್ರತಿಭಾ ಪುರಸ್ಕಾರ ನೀಡಲಾಯಿತು
ಸದಸ್ಯರಾದ ರೂಪರಾಜ ರೈ ಕೆ, ಪ್ರಸನ್ನ ಕೆ, ಉಮೇಶ್ ರೈ ಮರುವಂಜ, ಸೂರಪ್ಪ ಗೌಡ, ಯಾತಿಂದ್ರನಾಥ ರೈ ಪಿ ಡಿ, ಉದಯ ಕುಮಾರ್ ರೈ ಕೆ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷ ವಸಂತ ನಡುಬೈಲುರವರು ಮಾತನಾಡಿ, ನಮ್ಮಿಂದ ಏನಾದರೂ ಸಹಕಾರ ಬೇಕಿದ್ದಲ್ಲಿ ಸಹಕಾರ ನೀಡುತ್ತೇವೆ. ಇದು ಉತ್ತಮ ಸಂಸ್ಥೆಯಾಗಿ ಬೆಳಗಲಿ ಎಂದರು.

ನಿರ್ದೇಶಕಿ ಶ್ರೀಮತಿ ಭವ್ಯ ಭಾಸ್ಕರ ಪ್ರಾರ್ಥಿಸಿದರು ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್ ಸ್ವಾಗತಿಸಿದರು. ನಿರ್ದೇಶಕಿ ಶ್ರೀಮತಿ ಗೀತಾ ಕಳತ್ತಜೆ ವಂದಿಸಿದರು. ಕಾರ್ಯದರ್ಶಿ ಅಕ್ಷತಾ ವರದಿ ವಾಚಿಸಿದರು. ದೀಪಕ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು. (ವರದಿ, ಚಿತ್ರ :ಸಂಕಲ್ಪ ಸಾಲಿಯಾನ್ ಅಲೆಕ್ಕಾಡಿ)











